ಕಥುವಾ ಪ್ರಕರಣ: ಗುಲಾಂ ಮಹಮ್ಮದ್ ನೇತ್ರತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

ನ್ಯೂಸ್ ಕನ್ನಡ ವರದಿ-(21.04.18): ಉಡುಪಿ: ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷ ಪ್ರಾಯದ ಪುಟ್ಟ ಬಾಲಕಿಯ ಮೇಲಿನ ಅತ್ಯಾಚಾರ ಹಾಗು ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಮಾಜ ಸೇವಕ ಗುಲಾಂ ಮಹಮ್ಮದ್ ಹೆಜಮಾಡಿ ಇವರ ನೇತ್ರತ್ವದಲ್ಲಿ ಸರ್ವಧರ್ಮಿಯರು ಹಾಗು ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ 10 ನಿಮಿಷಗ ಕಾಲ ಮೌನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಡಾ.ದೇವಿಪ್ರಸಾದ್ ಶೆಟ್ಟಿ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಶಾಸಕ ಹಾಗು ಅವರ ಬೆಂಬಲಿಗರು ಸೇರಿಕೊಂಡು ಎಂಟು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆನಡೆಸುವ ಮೂಲಕ ದೇಶದ ಪ್ರಜ್ಙಾವಂತ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ.ಇಂತಹ ದುಷ್ಟರಿಂದಾಗಿ ದೇಶದಲ್ಲಿ ಮಹಿಳೆಯರಿಗೆ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.ಆರೋಪಿಗಳಿಗೆ ಕೂಡಲೇ ಮರಣದಂಡನೆ ವಿಧಿಸುವ ಮೂಲಕ ಹತ್ಯೆಗೀಡಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಶೆಟ್ಟಿ ಆಗ್ರಹಿಸಿದರು.

ಗುಲಾಂ ಮಹಮ್ಮದ್ ಹೆಜಮಾಡಿ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಪೂರ್, ಪರ್ಕಳ ಬಳಕೆದಾರರ ವೇದಿಕೆಯ ಗೌರಾವಾಧ್ಯಕ್ಷ ಅಬೂಬಕ್ಕರ್ ಹಾಜಿ, ರಫೀಕ್ ದೀವ್ ಉಚ್ಚಿಲ,
ಕಲ್ಕಟ್ಟ ಉಸ್ತಾದ್, ಎಂ.ಪಿ ಮೌಧಿನಬ್ಬ ಪಲಿಮಾರ್,ಸಿರಾಜ್ ಎನ್.ಎಚ್.ಉಚ್ಚಿಲ, ವಿಲ್ಸನ್ ಶಿರ್ವಾ, ಶೇಖ್ ಹೆಜಮಾಡಿ, ಫಾರೂಕ್ ಚಂದ್ರನಗರ, ದಿವಾಕರ್ ಚಂದ್ರನಗರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಝೀಝ್ ಹೆಜಮಾಡಿ ,ಸಾಧಿಕ್ ಎನ್.ಎಚ್. ಉಚ್ಚಿಲ, ಅರಫಾ ಬಾಯ್ಸ್ ಕಂಚಿನಡ್ಕ, ಉಚ್ಚಿಲ ನಾಗರಿಕ ಹೊರಾಟ ಮುಂದಾಳು ಶಾಬಾನ್ ಬಾವ , ಇಮ್ತಿಯಾಝ್ ಶಿರ್ವಾ , ಕೇಶವ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *