ಈಗೀಗ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಹೆಚ್ಚಿನ ಪ್ರಚಾರ ದೊರಕುತ್ತಿದೆ: ಬಿಜೆಪಿ ನಾಯಕಿ ಹೇಮಾಮಾಲಿನಿ

ನ್ಯೂಸ್ ಕನ್ನಡ ವರದಿ-(21.04.18): ಬಾಲಿವುಡ್‌ ಹಿರಿಯ ನಟಿ, ಬಿಜೆಪಿ ನಾಯಕಿ ಹೇಮಾ ಮಾಲಿನಿ ಅವರು “ಈ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಅತ್ಯಧಿಕ ಪ್ರಚಾರ ಸಿಗುತ್ತಿದೆ” ಎಂದು ಹೇಳಿದ್ದಾರೆ.

“ಹಿಂದೆಯೂ ರೇಪ್‌ ನಡೆಯುತ್ತಿದ್ದಿರಬಹುದು; ಆದರೆ ಅವುಗಳಿಗೆ ಪ್ರಚಾರ ಸಿಗುತ್ತಿರಲಲ್ಲ; ಹಾಗಾಗಿ ಜನರಿಗೆ ಅದರ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ; ಆದರೆ ಈಚಿನ ದಿನಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳಿಗೆ ಅತ್ಯಧಿಕ ಪ್ರಚಾರ ಸಿಗುತ್ತಿದೆ’ ಎಂದು ನಟಿ ಹೇಮಾ ಮಾಲಿನಿ ಹೇಳಿದರು. ತನ್ನ ಹೇಳಿಕೆಯನ್ನು ಕೊನೆಗೆ ಸಾವರಿಸಿಕೊಂಡ ಹೇಮಾ, “ಸಮಾಜದಲ್ಲಿ ಈ ಪರಿಯ ಅತ್ಯಾಚಾರಗಳು ನಡೆಯಬಾರದು. ಇದು ನಮ್ಮ ದೇಶವನ್ನು ಕೆಟ್ಟದಾಗಿ ಕಾಣಿಸುತ್ತದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *