ಕನ್ನಡದ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆಯೇ ಕ್ರಿಕೆಟಿಗ ಯಜುವೇಂದ್ರ ಚಾಹಲ್?
ನ್ಯೂಸ್ ಕನ್ನಡ ವರದಿ-(21.04.18): ಕ್ರಿಕೆಟ್ ಗೆ ಮತ್ತು ಚಿತ್ರರಂಗಕ್ಕೆ ಬಿಡಿಸಲಾರದ ನಂಟು ಇದೆ. ಹಲವಾರು ಪ್ರಮುಖ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಪ್ರಮುಖವಾಗಿ ಮುಹಮ್ಮದ್ ಅಝರುದ್ದೀನ್, ಝಹೀರ್ ಖಾನ್-ಸಾಗರಿಕಾ ಘೋಷ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹೀಗೆ ಹಲವಾರು. ಇದೀಗ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಯಜುವೇಂದ್ರ ಚಾಹಲ್ ಬಾಲಿವುಡ್ ಬಿಟ್ಟು ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದು ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಹರಡಿದೆ.
ಯಜುವೇಂದ್ರ ಚಾಹಲ್ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದಾನೆ. ತನಿಷ್ಕಾ ಕಪೂರ್ ಎಂಬ ಕನ್ನಡ ಚಿತ್ರನಟಿಯೊಂದಿಗೆ ಯಜುವೇಂದ್ರ ಚಾಹಲ್ ಡೇಟಿಂಗ್ ನಡೆಸುತ್ತಿದ್ದು ಹಲವಾರು ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನಿಷ್ಕಾ ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಸದ್ಯ ಚಾಹಲ್ ಐಪಿಎಲ್ ನಲ್ಲಿ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದು, ಐಪಿಎಲ್ ಮುಗಿದ ತಕ್ಷಣವೇ ಮದುವೆಯ ಕುರಿತಾದಂತೆ ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.