ಮರದಲ್ಲಿ ನೇತಾಡಿಕೊಂಡು ಫೋಟೋ ಕಿಕ್ಕಿಸಿದ ಈ ವೈರಲ್ ಫೋಟೊಗ್ರಾಫರ್ ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ-(21.04.18): ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಾದ್ಯಂತ ವೀಡಿಯೋವೊಂದು ವೈರಲ್ ಆಗಿತ್ತು. ಕೇರಳ ಮೂಲದ ಫೋಟೋಗ್ರಾಫರ್ ಒಬ್ಬ ನವ ವಧುವರರ ಫೋಟೊಶೂಟ್ ಗಾಗಿ ಮರದಲ್ಲಿ ನೇತಾಡಿಕೊಂಡು ಫೋಟೊ ಕ್ಲಿಕ್ಕಿಸುವ ವೀಡಿಯೋ ಎಲ್ಲರ ಹುಬ್ಬೇರಿಸಿತ್ತು. ಇದೀಗ ಕೊನೆಗೂ ಆ ವ್ಯಕ್ತಿಯ ಕುರಿತಾದಂತಹ ಮಾಹಿತಿ ತಿಳಿದು ಬಂದಿದೆ. ಕೇರಳದ 24ರ ಹರೆಯದ ವಿಷ್ಣು ಎಂಬವರೇ ಸದ್ಯದ ಸಾಮಾಜಿಕ ತಾಣಗಳ ಹೀರೋ…

ವಿಷ್ಣು ಸದ್ಯ ಪ್ರೊಫೆಶನಲ್ ಫೋಟೊಗ್ರಾಫರ್ ಆಗಿ ವೈಟ್ ರ್ಯಾಂಪ್ ಫೋಟೊಗ್ರಫಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ನಾನು ಹಲವು ಬಾರಿ ಫೋಟೊ ಕ್ಲಿಕ್ಕಿಸುವ ಸಲುವಾಗಿ ಮರಗಳನ್ನು ಹತ್ತಿದ್ದೇನೆ. ಆದರೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿದ್ದು ಇದೇ ಮೊದಲು. ಏನೇ ಆಗಲಿ ನಾನು ಕ್ಲಿಕ್ಕಿಸುವ ಫೋಟೊಗಳು ಮಾತ್ರ ಉತ್ತಮವಾಗಿ ಮೂಡಿ ಬರಬೇಕು ಎನ್ನುತ್ತಾರೆ ವಿಷ್ಣು. ಈ ವೀಡಿಯೋವನ್ನು ಮೊದಲು ಟ್ವಿಟ್ಟರ್ ಬಳಕೆದಾರ ಹರಾಮಿ ಪರಿಂದೇ ಶೇರ್ ಮಾಡಿದ್ದು, 4 ಲಕ್ಷ ಮಂದಿ ನೊಡಿದ್ದು, 8000ಕ್ಕೂ ಅಧಿಕ ಲೈಕ್ ಗಳು ಬಂದಿದೆ. ಈ ವೀಡಿಯೋ ಕುರಿತಾದಂತೆ ಟ್ವಿಟ್ಟರ್ ಬಳಕೆದಾರರು ಚಿತ್ರ ವಿಚಿತ್ರ ಕಮೆಂಟ್ ಗಳೊಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

https://twitter.com/BhatiaPriyanka6/status/986670607008915456

Leave a Reply

Your email address will not be published. Required fields are marked *