3 ದಿನಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿದ 7ರ ಹರೆಯದ ಪುತ್ರ!
ನ್ಯೂಸ್ ಕನ್ನಡ ವರದಿ-(21.04.18): ತಾಯಿಯು ಫ್ಯಾನ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿ ಮೃತಪಟ್ಟಿದ್ದರೂ ತಾಯಿಯ ಮೃತದೇಹದ ಪಕ್ಕದಲ್ಲೇ 7 ವರ್ಷದ ಪುತ್ರನೋರ್ವ ಮೂರು ದಿನಗಳ ಕಾಲ ಮಲಗಿದ್ದ ಮನಕಲಕುವ ಘಟನೆಯು ಪಂಜಾಬ್ ನ ಮೊಹಾಲಿ ಪ್ರಾಂತ್ಯದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಜಸ್ಪಿಂದರ್ ಕೌರ್ ಎಂದು ಗುರುತಿಸಲಾಗಿದೆ. ತಾಯಿಯು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೂ ಮಗ ಅರ್ಮಾನ್ ಪಕ್ಕದ ಸೋಫಾದಲ್ಲೇ ಮಲಗಿಕೊಂಡಿದ್ದನೆಂದು ತಿಳಿದು ಬಂದಿದೆ.
ಜಸ್ಪಿಂದರ್ ಕೌರ್ ಕುಟುಂಬದಲ್ಲಿ ಸಣ್ಣಮಟ್ಟದ ತೊಂದರೆಗಳಿದ್ದು, ಅಲ್ಲದೇ ಪುತ್ರ ಅರ್ಮಾನದ ಗೆ ಯಾವುದೇ ಶಾಲೆಯಲ್ಲೂ ದಾಖಲಾತಿ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಕೌರ್ ಆತ್ಮತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ತನ್ನ ಮಗನೊಂದಿಗೆ ಈ ಕುರಿತು ಯಾರೊಂದಿಗೂ ಹೇಳಬಾರದು ಎಂದಿದ್ದಳು. ಅದರಂತೆಯೇ ಪುತ್ರ ಅರ್ಮಾನ್ ಮೂರು ದಿನಗಳ ಕಾಲ ಬಿಸ್ಕೆಟ್ ತಿನ್ನುತ್ತಾ ಹಸಿವು ನೀಗಿಸಿಕೊಂಡಿದ್ದು, ಕೊನೆಗೆ ಪಕ್ಕದ ಮನೆಯವರಿಗೆ ವಾಸನೆ ಬಂದ ಬಳಿಕ ಆತ್ಮಹತ್ಯೆಯ ವಿಚಾರ ತಿಳಿದಿದೆ. ಇದೀಗ ಕೌರ್ ಪತಿಗೆ ಮಾಹಿತಿ ತಿಳಿಸಿದ್ದು, ಹೆಚ್ಚಿನ ಮಾಹಿತಿ ವಿಚಾರಣೆಯ ಬಳಿಕವೇ ತಿಳಿದು ಬರಲಿದೆ.