ಮಂಡ್ಯದಿಂದ ಅಂಬರೀಷ್ ಬದಲಿಗೆ ರಮ್ಯಾ ಸ್ಪರ್ಧೆಯ ಸುದ್ದಿ ಬಗ್ಗೆ ರಮ್ಯಾ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳು ಟಿಕೆಟ್ ಘೋಷಣೆ ಮಾಡಿದ್ದು ಒಂದೆಡೆ ಟಿಕೆಟ್ ಸಿಗದವರು ಬಂಡಾಯವೆದ್ದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರೆ ನಟ ಕಮ್ ರಾಜಕೀಯ ನಾಯಕರಾದ ಅಂಬರೀಷ್‌ ರವರಿಗೆ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಟಿಕೆಟ್‌ ನೀಡಿದ್ದರೂ ಕೂಡ ಈವರೆಗೆ ಅಂಬರೀಷ್ ರವರು ತಮ್ಮ ನಿಲುವನ್ನು ಸಮರ್ಥಿಸಲು ಮುಂದಾಗದೇ ಇರುವರು.

ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಂಬರೀಷ್‌ ರವರ ಬದಲಿಗೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾರವರು ಸ್ಪರ್ಧಿಸಲಿರುವರು ಎಂದು ಹಲವು ಪ್ರಶ್ನೆಗಳು ತಲೆ ಎತ್ತಿವೆ. ಇವುಗಳಿಗೆ ಪ್ರತ್ಯುತ್ತರವಾಗಿ ರಮ್ಯಾ ‘ಇಲ್ಲ, ನಾನು ಸ್ಪರ್ಧಿಸುತ್ತಿಲ್ಲ’ ಎಂದು ಸ್ಪಷ್ಟವಾಗಿ ಟ್ವೀಟ್‌ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷಕ್ಕೂ ಕೂಡ, ಶಾಸಕ ಅಂಬರೀಷ್‌ಗೆ ಟಿಕೆಟ್‌ ಘೋಷಣೆಯಾಗಿ ಐದು ದಿನ ಕಳೆದರೂ ಅವರು ಮಂಡ್ಯ ಕ್ಷೇತ್ರಕ್ಕೆ ಬಂದು ನಾಮಪತ್ರ ಸಲ್ಲಿಸುವ, ಪ್ರಚಾರ ಆರಂಭಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂಬುದು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

Leave a Reply

Your email address will not be published. Required fields are marked *