ಫಜೇರೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಶೀರೂರು ಶ್ರೀ!
ನ್ಯೂಸ್ ಕನ್ನಡ ವರದಿ(21-04-2018): ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಇಂದು ಫಜೇರೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದು ಕನ್ನ ನಾಮಪತ್ಕವನ್ನು ಸಲ್ಲಿಸಿದರು.
ನಂತರ ಮಾತನಾಡಿದ ಶೀರೂರು ಶ್ರೀ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ಪಡೆಯುವುದಿಲ್ಲ. ಒಂದು ವೇಳೆ ಅಮಿತ್ ಶಾ ಅಥವಾ ಮೋದಿ ಹಿಮತೆಗೆಯುವಂತೆಮನವೊಲಿಸಿದರೆ ಅದರ ನಂತರ ಚಿಂತನೆ ನಡೆಸುತ್ತೇನೆ ಎಂದರು.
ತಾನು ಈ ಬಾರಿ ಜಯಿಸುವ ವಿಶ್ವಾಸವಿದ್ದು, ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುವುದಾಗಿ ಹೇಳಿದರು. ನಾನು 40 ವರ್ಷದಿಂದ ಬಿಜೆಪಿಯ ಮತದಾರನಾಗಿದ್ದೇನೆ. ಉಡುಪಿಯ ಬಿಜೆಪಿ ಸರಿಯಿಲ್ಲ ಎಂದರು.