6 ತಿಂಗಳ ಮಗುವಿನ ಮೇಲೆ ಅತ್ಯಾಚಾರ: ಚಿಕ್ಕಪ್ಪ ಸುನೀಲ್ ನಿಂದಲೇ ಭೀಕರ ಕೃತ್ಯ!

ನ್ಯೂಸ್ ಕನ್ನಡ ವರದಿ-(20.04.18): ಬಲೂನ್ ಮಾರುವ ಮೂಲಕ ಜೀವನ ನಡೆಸುತ್ತಿದ್ದ ಪುಟ್ಟ ಕುಟುಂಬವೊಂದರ ಆರು ತಿಂಗಳ ಪುಟ್ಟ ಹಸುಳೆಯನ್ನು ತಾಯಿಯ ಒಕ್ಕದಲ್ಲಿ ಮಲಗಿದ್ದಲ್ಲಿಂದ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆಗೈದ ಭೀಭತ್ಸ ಭೀಕರ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅತ್ಯಾಚಾರ ಮತ್ತು ಕೊಲೆಗೈದವನು ಯಾವುದೇ ಅಪರಿಚಿತನಾಗಿರದೇ ಆ ಮಗುವಿನ ಸ್ವಂತ ಚಿಕ್ಕಪ್ಪ ಎಂಬ ವಿಷಯವು ಬೆಳಕಿಗೆ ಬಂದಿದೆ. ಆರೋಪಿಯನ್ನು ಸುನೀಲ್ ಭೀಲ್(21) ಎಂದು ಗುರುತಿಸಲಾಗಿದೆ. ಆರು ತಿಂಗಳ ಹೆಣ್ಣು ಮಗವನ್ನು ಅದರ ಚಿಕ್ಕಪ್ಪನೇ ಅಪಹರಿಸಿ ಇಲ್ಲಿನ ರಾಜವಾಡ ಪ್ರದೇಶದಲ್ಲಿನ ಕಟ್ಟಡವೊಂದರ ತಳ ಅಂತಸ್ತಿನಲ್ಲಿ ಅತ್ಯಾಚಾರ ಗೈದು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗವನ್ನು ಅಪಹರಿಸಿ ಅತ್ಯಾಚಾರಗೈದು ಕೊಂದಿರುವ ಚಿಕ್ಕಪ್ಪನನ್ನು 21ರ ಹರೆಯದ ಸುನೀಲ್‌ ಭೀಲ್‌ ಎಂದು ಗುರುತಿಸಲಾಗಿದೆ. ರಾಜವಾಡ ಕೋಟೆಯ ಹೊರಗೆ ಶುಕ್ರವಾರ ರಾತ್ರಿ ಮಗುವಿನ ಕುಟುಂಬ ಮಲಗಿಕೊಂಡಿದ್ದಲ್ಲಿಂದ ಆರೋಪಿ ಸುನೀಲ್‌ ಭೀಲ್‌ ಮಗುವನ್ನು ಹೆಗಲಿಗೇರಿಸಿಕೊಂಡು ಸಾಗುತ್ತಿದ್ದ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿದ್ದು ಇದರ ಆಧಾರದಲ್ಲಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *