ರಿಷಭ್ ಪಂತ್ ಅಬ್ಬರ: ಬೆಂಗಳೂರು ವಿರುದ್ಧ ಉತ್ತಮ ಮೊತ್ತ ದಾಖಲಿಸಿದ ಡೆಲ್ಲಿ ಡೇರ್ ಡೆವಿಲ್ಸ್!
ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 19ನೇ ಪಂದ್ಯಾಟವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ನಡೆಯುತ್ತಿದೆ. ಪ್ರಥಮ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಭಾರತೀಯ ಯುವ ಆಟಗಾರ ರಿಷಭ್ ಪಂತ್ ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 174 ರನ್ ದಾಖಲಿಸಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ನಾಯಕ ಗಂಭೀರ್ ವಿಕೆಟ್ ಕಳೆದುಕೊಂಡಿತು. ಬಳಿಕ ಶ್ರೇಯಸ್ ಅಯ್ಯರ್(52) ಉತ್ತಮ ಪ್ರದರ್ಶನ ತೋರಿದರು. ಮೊದಲ 10 ಓವರ್ ಗಳಲ್ಲಿ ಅತೀ ಕಡಿಮೆ ರನ್ ಗಳಿಸಿದ್ದ ಡೆಲ್ಲಿ ತಂಡವು 15 ಓವರ್ ಗಳ ಬಳಿಕ ರಿಷಬ್ ಪಂತ್ ನೆರವಿನಿಂದ ಉತ್ತಮ ರನ್ ದಾಖಲಿಸಿತು. ರಿಷಭ್ ಪಂತ್ ಕೇವಲ 48 ಎಸೆತಗಳಲ್ಲಿ ಭರ್ಜರಿ 85 ರನ್ ದಾಖಲಿಸಿದರು. ಬೌಲಿಂಗ್ ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಚಾಹಲ್ ಮಿಂಚಿದರು.