ನಾಮಪತ್ರ ಸಲ್ಲಿಸಿದ ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಯಾರು ಗೊತ್ತೇ? ಅವರ ಆಸ್ತಿ ಎಷ್ಟು ಗೊತ್ತಾ?

ನ್ಯೂಸ್ ಕನ್ನಡ ವರದಿ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ನಾಮಪತ್ರವನ್ನು ಸಲ್ಲಿಸಿದ್ದು, 1020.55 ಕೋಟಿ ಆಸ್ತಿ ಹೊಂದಿರುವುದಾಗಿ ಪ್ರಿಯಾಕೃಷ್ಣ ಘೋಷಿಸಿಕೊಂಡಿದ್ದಾರೆ. ಇವರು ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಇದರಲ್ಲಿ 860 ಕೋಟಿ ಮೌಲ್ಯದ ಚರಾಸ್ತಿ, 160 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು 802 ಕೋಟಿ ರೂಪಾಯಿ ಸಾಲವಿದೆ ಎಂದು ಪ್ರಿಯಾಕೃಷ್ಣ ಘೋಷಿಸಿಕೊಂಡಿದ್ದಾರೆ.

ಪ್ರಿಯಾಕೃಷ್ಣರ ಸಂಪತ್ತಿನಲ್ಲಿ ಹೂಡಿಕೆಗಳ ಪ್ರಮಾಣವೇ ಹೆಚ್ಚಾಗಿದ್ದು, ಇದರ ಜೊತೆಗೆ ಚಿನ್ನ, ವಜ್ರ ಮತ್ತು ಬೆಲೆಬಾಳುವ ವಾಹನಗಳನ್ನು ಹೊಂದಿದ್ದಾರೆ. 2013 ರ ಚುನಾವಣೆಯಲ್ಲಿ 906 ಕೋಟಿ ಆಸ್ತಿ ಹೊಂದಿದ್ದ ಪ್ರಿಯಾಕೃಷ್ಣ 2018 ರಲ್ಲಿ 1020 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, 114 ಕೋಟಿ ಆಸ್ತಿ ಹೆಚ್ಚಳವಾಗಿದೆ

Leave a Reply

Your email address will not be published. Required fields are marked *