ವಿಲಿಯರ್ಸ್ ಅಬ್ಬರ: ಡೆಲ್ಲಿ ವಿರುದ್ಧ ಜಯಗಳಿಸಿದ ಆರ್ಸಿಬಿ ಬೆಂಗಳೂರು ತಂಡ!
ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 19ನೇ ಪಂದ್ಯಾಟವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ನಡೆದಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಭರ್ಜರಿ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಭರ್ಜರಿ ಜಯ ಗಳಿಸಿದೆ.
ರಾಯಲ್ ಚಾಲೆಂಜರ್ಸ್ ಪ್ರಾರಂಭದಲ್ಲಿ ಆಘಾತವನ್ನೆದುರಿಸಿತು. ಮನನ್ ವೋಹ್ರಾ ಮತ್ತು ಕ್ವಿಂಟನ್ ಡಿಕಾಕ್ ಬೇಗನೇ ಔಟಾದರು. ಬಳಿಕ ಅದ್ಭುತ ಪ್ರದರ್ಶನ ನೀಡಿದ ಎಬಿಡಿ ವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ 90 ರನ್ ಬಾರಿಸಿ ಡೆಲ್ಲಿ ತಂಡದ ಬೌಲರ್ ಗಳ ಬೆವರಿಳಿಸಿದರು. ನಾಯಕ ವಿರಾಟ್ ಕೊಹ್ಲಿ 30 ರನ್ ಗಳಿಸಿ ಹರ್ಷಲ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮನ್ ದೀಪ್ ಸಿಂಗ್ ಮತ್ತು ವಿಲಿಯರ್ಸ್ ಓವರ್ ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.