ಅಪಘಾತಕ್ಕೀಡಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಸಚಿವ ಡಿಕೆಶಿ!

ನ್ಯೂಸ್ ಕನ್ನಡ ವರದಿ-(22.04.18): ಯಾರೇನೇ ಆಗಲಿ ನಮಗೇಕೆ ಅವರ ಉಸಾಬರಿ ಎಂದು ಸುಮ್ಮನಾಗುವ ವ್ಯಕ್ತಿಗಳ ನಡುವೆಯೂ, ರಾಜ್ಯದ ಸಚಿವ ಸ್ಥಾನದಲ್ಲಿದ್ದುಕೊಂಡು ಸಾಮಾನ್ಯ ಜನರ ನೋವಿಗೆ ಸ್ಪಂದನೆ ಮಾಡಿರುವ ಕರ್ನಾಟಕ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಡಿ.ಕೆ ಶಿವಕುಮಾರ್ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಸಂಜೆ ಬೆಂಗಳೂರಿನ ಗಾಲ್ಫ್ ಕ್ಲಬ್ ಸಮೀಪ ಕಾರಿನಲ್ಲಿ ಬರುತ್ತಿದ್ದ ಡಿ.ಕೆ ಶಿವಕುಮಾರ್ ರಿಗೆ ರಸ್ತೆ ಬದಿಯಲ್ಲಿ ಕಾರೊಂದು ಅಪಘಾತಕ್ಕೀಡಾದದ್ದು ಕಂಡಿತು. ಕೂಡಲೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದ ಶಿವಕುಮಾರ್, ತಮ್ಮ ಬೆಂಗಾವಲು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕೂಡಲೇ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದರು. ಇಷ್ಟು ಮಾತ್ರವಲ್ಲದೇ ಅಪಘಾತದ ಕಾರಣದಿಂದ ಕಾರಿನ ಗಾಜಿನ ಚೂರುಗಳು ರಸ್ತೆಗೆ ಬಿದ್ದಿದ್ದವು. ಅವುಗಳನ್ನು ಕೂಡಾ ಎತ್ತಿ ಪಕ್ಕಕ್ಕಿಟ್ಟು ಟ್ರಾಫಿಕ್ ಜಾಮ್ ಆಗದಂತೆ ನೋಡೊಕೊಂಡರು. ಡಿಕೆಶಿಯವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *