ಫಿಲ್ಮ್ ಚೇಂಬರ್ ಮುಂದುಗಡೆಯೇ ಅರೆನಗ್ನ ಪ್ರತಿಭಟನೆ ಮಾಡಿದ ತೆಲುಗು ನಟಿ!
ನ್ಯೂಸ್ ಕನ್ನಡ ವರದಿ-(07.04.18): ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತಾದಂತೆ ಹಲವು ನಟಿಯಂದಿರು ಧ್ವನಿಯೆತ್ತಿದ್ದರು. ಈ ಧ್ವನಿಗಳು ಸಾಮಾಜಿಕ ಜಾಲತಾಣ, ಟ್ವಿಟ್ಟರ್ ಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆಯೇ ಹೋಗಿರುವ ತೆಲುಗು ಚಿತ್ರರಂಗದ ಖ್ಯಾತ ನಟಿ ಶ್ರೀ ರೆಡ್ಡಿ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಚೇರಿಯ ಮುಂದುಗಡೆ ಬಟ್ಟೆ ಬಿಚ್ಚಿ ಅರೆನಗ್ನರಾಗಿ ಪ್ರತಿಭಟನೆ ಮಾಡಿದ್ದಾರೆ. ಈ ಕುರಿತಾದಂತೆ ಮೊದಲೇ ಉಲ್ಲೇಖ ಮಾಡಿದ್ದ ಶ್ರೀ ರೆಡ್ಡಿ ಇದೀಗ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಕಾಸ್ಟಿಂಗ್ ಕೌಚ್ ಬಗ್ಗೆ ತೆಲುಗು ಸಿನಿಮಾ ಇಂಡಸ್ಟ್ರಿ ಇದುವರೆಗೂ ಏಕೆ ಮಾತನಾಡುತ್ತಿಲ್ಲ ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ. ಮನೆಯಿಂದ ನೇರ ಫಿಲ್ಮ್ ಚೇಂಬರ್ ಬಳಿ ಬಂದ ಶ್ರೀರೆಡ್ಡಿ ತಮ್ಮ ಬಟ್ಟೆಗಳನ್ನು ರಸ್ತೆಯಲ್ಲೇ ಕಳಚಿ ಅರೆನಗ್ನರಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಿರ್ದೇಶಕರೊಬ್ಬರ ಮೇಲೆ ಪರೋಕ್ಷವಾಗಿ ಆರೋಪಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದ ನಿರ್ದೇಶಕ, ನನ್ನ ಮೇಲಿನ ಆರೋಪಗಳನ್ನು ಹಿಂತೆಗೆದುಕೊಂಡು ಕ್ಷಮೆ ಕೇಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು.
https://www.youtube.com/watch?v=t3WYSaXZq80&t=40s