ಮಧ್ಯ ಪ್ರದೇಶ: ಕಸದ ರಾಶಿಯಲ್ಲಿ ಪತ್ತೆಯಾದ ಶ್ಯಾಮ್ ಪ್ರಸಾದ್ ಮುಖರ್ಜಿ ವಿಗ್ರಹ!
ನ್ಯೂಸ್ ಕನ್ನಡ ವರದಿ(22-04-2018): ದೇಶಾದ್ಯಂತ ವಿಗ್ರಹಗಳಿಗೆ ಹಾನಿಯನ್ನುಂಟು ಮಾಡುತ್ತಿರುವ ಸುದ್ಧಿಗಳು ಪ್ರಸಾರವಾಗುತ್ತಿದ್ದಂತೆಯೇ ಮಧ್ಯ ಪ್ರದೇಶದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯ ವಿಗ್ರಹವು ಕಸದ ರಾಶಿಯಲ್ಲಿ ಪತ್ತೆಯಾಗಿದೆ.
ಮಧ್ಯ ಪ್ರದೇಶದ ದೇವಸ್ ನಲ್ಲಿರುವ ಗೋದಾಮಿನ ಪಕ್ಕದಲ್ಲಿರುವ ಕಸದ ರಾಶಿಯಲ್ಲಿ ಈ ವಿಗ್ರಹವು ಪತ್ತೆಯಾಗಿದ್ದು, ಆ ವಿಗ್ರಹವನ್ನು ಎಲ್ಲಿಂದ ಮುರಿದು ತರಲಾಗಿದೆ ಹಾಗೂ ಯಾರು ತಂದು ಕಸದ ರಾಶಿಯಲ್ಲಿ ಹಾಕಿದ್ದಾರೆ ಎಂಬ ಬಗ್ಗೆ ಸುಳಿವು ದೊರೆತಿಲ್ಲ.
ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೋಲೀಸರು ವಿಗ್ರಹವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಿಗ್ರಹವನ್ನು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.