ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಸಂತ್ರಸ್ತೆಯ ವಯಸ್ಸಿನ ನಿರ್ಭಂದ ಯಾಕೆ?: ನಿರ್ಭಯಾ ತಂದೆ!

ನ್ಯೂಸ್ ಕನ್ನಡ ವರದಿ(22-04-2018): ಅತ್ಯಾಚಾರ ಎಸಗುವವರಲ್ಲಿ ಅಪ್ರಾಪ್ತರು, ವಯಸ್ಕರು ಎಂಬ ತಾರತಮ್ಯ ಸರಿಯಲ್ಲ. ಮಕ್ಕಳ ಅತ್ಯಾಚಾರಿಗಳಿಗೆ ಮಾತ್ರ ಗಲ್ಲು ಶಿಕ್ಷೆಯ ಸುಗ್ರಿವಾಜ್ಞೆ ಯಾಕೆ?. ಇದು 2019ರ ಚುನಾವಣೆಯ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮಾಡಿದ ಸುಗ್ರಿವಾಜ್ಞೆಯಾಗಿದೆ ಎಂದು ನಿರ್ಭಯಾ ತಂದೆ ಅಭಿಪ್ರಾಯ ಪಟ್ಟಿದ್ದಾರೆ.

12 ವರ್ಷದ ಒಳಗಿನವರು ಎನ್ನುವುದು ತಾರ್ಕಿಕ ವಿಷಯವಾಗಿದ್ದು, ಈ ಕಾನೂನು ದುರುಪಯೋಗವಾಗುವ ಸಾಧ್ಯತೆಯಿದೆ ಎಂದರು. 2012 ನೇ ಡಿಸೆಂಬರ್ 16ರಂದು ದುಷ್ಕರ್ಮಿಗಳಿಂದ ಅತ್ಯಾಚಾರ ಮಾಡಲ್ಪಟ್ಟು, ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ನಿರ್ಭಯಾಳ ರೇಪ್ ಆ್ಯಂಡ್ ಮರ್ಡರ್ ಪ್ರಕರಣವು ದೇಶಾದ್ಯಂತ ಬಹು ಚರ್ಚೆಗೆ ಗ್ರಾಸವಾಗಿತ್ತು.

12 ವರ್ಷದೊಳಗಿನವರನ್ನು ಅತ್ಯಾಚಾರ ಮಾಡಿದವರಿಗೆ ಮಾತ್ರ ಗಲ್ಲು ಶಿಕ್ಷೆಯ ಸುಗ್ರಿವಾಜ್ಞೆ ಯಾಕೆ?. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಂತೃಸ್ತೆಯ ಮಯಸ್ಸಿನ ಲೆಕ್ಕಾಚಾರವೇಕೆ?. ಇದು ನ್ಯಾಯಸಮ್ಮತವಲ್ಲ. ಕೇವಲ ಮುಂದಿನ ಚುನಾವಣೆಯ ಉದ್ದೇಶದಿಂದ ಹೊರಡಿಸಿದ ಸುಗ್ರೀವಾಜ್ಞೆ ಇದಾಗಿದೆ ಎಂದರು.

Leave a Reply

Your email address will not be published. Required fields are marked *