ಸುರತ್ಕಲ್; ಬಿಜೆಸಿ ಪಕ್ಷದಿಂದ ಪ್ರವೀಣ್ ಕೇಶವ ಕರ್ಕೇರ ಕಣಕ್ಕೆ
ನ್ಯೂಸ್ ಕನ್ನಡ ವರದಿ-(22.04.18): ಸುರತ್ಕಲ್: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ “ಭಾರತೀಯ ಜನಶಕ್ತಿ ಕಾಂಗ್ರೆಸ್” ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಲ್ಲವ ಸಮುದಾಯದ ಪ್ರವೀಣ್ ಕೇಶವ ಕರ್ಕೆರ ಅವರನ್ನು ಬಿಜೆಸಿ ರಾಜ್ಯ ಸಮಿತಿ ಆಯ್ಕೆಗೊಳಿಸಿ ಅಧಿಕೃತವಾಗಿ ಘೋಷಿಸಿದೆ ಎಂದು ಪಕ್ಷದ ಸಂಸ್ಥಾಪಕಿ ಅನುಪಮ ಶೆಣೈ ತಿಳಿಸಿದ್ದಾರೆ.