ಉತ್ತರ ಪ್ರದೇಶ: ಚಿಕಿತ್ಸೆಗಾಗಿ ಹೋದ ಅಪ್ರಾಪ್ತ ಬಾಲಕಿಗೆ ಡ್ರಗ್ಸ್ ನೀಡಿ ವೈದ್ಯನಿಂದ ಅತ್ಯಾಚಾರ!
ನ್ಯೂಸ್ ಕನ್ನಡ ವರದಿ(22-04-2018): ದೇಶದಲ್ಲಿ ಪದೇ ಪದೇ ಕೇಳಿಬರುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕಾನೂನು ಜಾರಿ ಮಾಡಿದ್ದರೂ ಕೂಡ ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದಕ್ಕೊಂದು ಹೊಸ ಸೇರ್ಪಡೆ ಉತ್ತರ ಪ್ರದೇಶದ ಮುಜಾಪರ್ ನಗರ.
ತಡವಾಗಿ ಬೆಳಕಿಗೆ ಬಂದ ಈ ಪ್ರಕರಣವು ಕಳೆದ ಮಂಗಳವಾರ ನಡೆದಿದ್ದು,ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಕಾಮುಕ ವೈದ್ಯನೊಬ್ಬ ರಾಕ್ಷಸಿ ಪ್ರವೃತ್ತಿ ಮೆರೆದಿದ್ದು, ಅಪ್ರಾಪ್ತೆ ರೋಗಿಯನ್ನು ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ್ದಾನೆ.
ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಮನೆಗೆ ಹಿಂದಿರುಗುವ ಎರಡು ದಿನಗಳ ಮುಂಚೆ ಆಕೆ ಕಾಣೆಯಾಗಿದ್ದಳು.ಆಕೆಯ ಸ್ಥಿತಿ ಬಗ್ಗೆ ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣವೇ ಕುಟುಂಬದವರು ಠಾಣೆಗೆ ದೂರು ನೀಡಿದ್ದಾರೆ.