ನೀರವ್ ಮೋದಿಯ ಕಿಸೆಗೆ ನೋಟುಗಳನ್ನು ತುಂಬಿಸುವ ಮೂಲಕ ಪ್ರಧಾನಿ ಬ್ಯಾಂಕುಗಳನ್ನು ಖಾಲಿ ಮಾಡಿದ್ದಾರೆ: ರಾಹುಲ್ ಗಾಂಧಿ!
ನ್ಯೂಸ್ ಕನ್ನಡ ವರದಿ(22-04-2018): ದೇಶದ ಹಲವು ರಾಜ್ಯಗಳಲ್ಲಿ ಎಟಿಎಂ ಗಳು ನೋಟಿನ ಕೊರತೆ ಎದುರಿಸುತ್ತಿರುವ ಕುರಿತಾಗಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ರಾಷ್ಟ್ರಾಧ್ಕಕ್ಷ ರಾಹುಲ್ ಗಾಂಧಿ ಪ್ರಧಾನಿಯವರ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರು ನೀರವ್ ಮೋದಿ ಜೇಬು ತುಂಬಿಸುವ ಮೂಲಕ ದೇಶದ ಎಟಿಎಂ ಗಳನ್ನು ಖಾಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಆಂದ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಹಲವು ದಿನಗಳಿಂದ ನೋಟಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಬಹುತೇಕ ಎಟಿಎಂ ಗಳು ಬರಿದಾಗಿವೆ.
ಕೆಲವು ರಾಜ್ಯಗಳಲ್ಲಿ ಹಠಾತ್ತನೆ ನೋಟಿನ ಕೊರತೆ ಉಂಟಾಗಿದ್ದು, ಇಂತಹ ರಾಜ್ಯಗಳಿಗೆ ಹೆಚ್ಚಿನ ನೋಟನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಕೇಂದ್ರವನ್ನು ಟೀಕಿಸಿದ ರಾಹುಲ್ ಗಾಂಧಿ, ದೇಶದಲ್ಲಿರುವ ನೋಟುಗಳನ್ನು ನೀರವ್ ಮೋದಿಯ ಕಿಸೆಗೆ ತುಂಬಿಸುವ ಮೂಲಕ ಮೋದಿಯವರು ಬ್ಯಾಂಕುಗಳನ್ನು ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.