ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ: ಸುಗ್ರೀವಾಜ್ಞೆಗೆ ಸಹಿ ಹಾಕಿದ ರಾಷ್ಟ್ರಪತಿ!

ನ್ಯೂಸ್ ಕನ್ನಡ ವರದಿ-(22.04.18): ನಿನ್ನೆ ಕೇಂದ್ರ ಸಚಿವ ಸಂಪುಟ ಅಸ್ತು ನೀಡಿದ್ದ 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಸುಗ್ರಿವಾಜ್ಞೆಗೆ ಇಂದು ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕುವುದರೊಂದಿದೆ ಈ ಕಾನೂನು ದೇಶದಲ್ಲಿ ಇಂದಿನಿಂದಲೇ ಜಾರಿಗೆ ಬರಲಿದೆ.

ಕಥುವಾ ಹಾಗೂ ಸೂರತ್‌ ನಲ್ಲಿ ಮಕ್ಕಳ ಮೇಲಿನ ಹಾಗೂ ಉನ್ನಾವ್‌ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ ಈ ಸುಗ್ರಿವಾಜ್ಞೆ ಹೊರಡಿಸಲಾಗಿತ್ತು. ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಮೇಲೆ ಅತ್ಯಾಚಾರಿಗಳಿಗೆ ಕಠಿನ ಕಾನೂನಿನ ರಚನೆ ಮಾಡುವ ಒತ್ತಡವಿತ್ತು.

12 ವರ್ಷದೊಳಗಿನ ಮಕ್ಳಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳ ತನಿಖೆಯನ್ನು ಪೋಲೀಸರು 2 ತಿಂಗಳಲ್ಲಿ ಮುಗಿಸಬೇಕಾಗಿದ್ದು, ನಂತರದ ಎರಡೇ ತಿಂಗಳಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಗಿಸಿ ಆರೋಪ ಸಾಬೀತಾದಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸ ಬಹುದಾಗಿದೆ. ಒಂದು ವೇಳೆ ಆರೋಪಿಯು ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಿದಲ್ಲಿ, ಆರು ತಿಂಗಳೊಳಗೆ ಕೋರ್ಟ್ ಮೇಲ್ಮನವಿಯನ್ನು ಇತ್ಯರ್ಥಗೊಳಿಸಬೇಕಾಗುತ್ತದೆ.

Leave a Reply

Your email address will not be published. Required fields are marked *