ಇದು ನನ್ನ ಭಾರತವೆಂದು ಹೇಳಲು ನಾಚಿಕೆಯಾಗುತ್ತಿದೆ; ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸಂತಸ ತಂದಿದೆ: ನಟಿ ಸಿಮಿ ಗರೆವಾಲ್!
ನ್ಯೂಸ್ ಕನ್ನಡ ವರದಿ(22-04-3018): ಪ್ರತಿದಿನ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವ ಈ ದೇಶ ನನ್ನದೆಂದು ಹೇಳಲು ನಾಚಿಕೆಯಾಗುತ್ತಿದೆ. ಇದು ನನ್ನ ಭಾರತವಲ್ಲ ಎಂದು ನಟಿ ಸಿಮಿ ಗರೆವಾಲ್ ಹೇಳಿದ್ದಾರೆ.
ಪ್ರಪಂಚವನ್ನು ಅರಿಯದ ಮಕ್ಕಳು ದೇವರಿಗೆ ಸಮಾನ. ಅಂತಹ ಅಪ್ರಾಪ್ತ ಮಕ್ಕಳನ್ನು ಅತ್ಯಾಚಾರ ಮಾಡುವುದು ಹೇಯ ಕೃತ್ಯ. ಯಾರನ್ನೂ ಅತ್ಯಾಚಾರ ಮಾಡಿದರು ಅವರಿಗೆ ಗಲ್ಲಿನಂತಹ ಕಠಿನ ಶಿಕ್ಷೆಯನ್ನೇ ನೀಡಬೇಕೆಂದು ಸಿಮಿಗರೆವಾಲ್ ಹೇಳಿದರು.
ನಿನ್ನೆ ಕೇಂದ್ರ ಸರಕಾರ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ಆದ್ಯಾದೇಶವನ್ನು ಸ್ವಾಗತಿಸಿದ ಸಿಮಿಗರೆವಾಲ್, ಇಂತಹ ಕಠಿನ ಕಾನೂನುಗಳಿಂದಲೇ ಅತ್ಯಾಚಾರವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.aa