ಬಿಜೆಪಿ ಪಕ್ಷದಿಂದ ಎಲ್ಲವನ್ನೂ ಪಡೆದ ಯಶ್ವಂತ್ ಸಿನ್ಹಾ ಓರ್ವ ಕಾಂಗ್ರೆಸ್ ನಾಯಕನಂತೆ ಅಭಿನಯಿಸುತ್ತಿದ್ದಾರೆ: ಬಿಜೆಪಿ!

ನ್ಯೂಸ್ ಕನ್ನಡ ವರದಿ(22-04-2018): ಬಿಜೆಪಿ ಪಕ್ಷದಿಂದ ಎಲ್ಲಾ ಲಾಭವನ್ನು ಪಡೆದ ಯಶ್ವಂತ್ ಸಿನ್ಹಾ ಓರ್ವ ಕಾಂಗ್ರೆಸ್ ನಾಯಕನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಅನಿಲ್ ಬಲೂನಿ ಹೇಳಿದ್ದಾರೆ. ನಿನ್ನೆ ಯಶ್ವಂತ್ ಸಿನ್ಹಾ ಬಿಜೆಪಿಯೊಂದಿಗಿರುವ ಎಲ್ಲಾ ಸಂಬಂದಗಳನ್ವು ನಾನು ಮುರಿಯುತ್ತೇನೆಂಬ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ನಾಯಕರಿಂದ ಈ ಪ್ರತಿಕ್ರಿಯೆ ಬಂದಿದೆ.

ಬಿಜೆಪಿಯು ಯಶ್ವಂತ್ ಸಿನ್ಹಾ ಅವರಿಗೆ ಎಲ್ಲಾ ಹುದ್ದೆಗಳನ್ನು ನೀಡಿದೆ ಮಾತ್ರವಲ್ಲ ಅವರು ಪಕ್ಷದ ಓರ್ವ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಆದರೆ ಇಂದಿನಿಂದ ಅವರು ಪಕ್ಷದ ಭಾಗವಾಗಿರುವುದಿಲ್ಲ. ಅವರ ನೀಚತನದ ಹೇಳಿಕೆಗಳು ನೋಡಿದರೆ ಅವರು ಪಕ್ಷವನ್ನು ಟೀಕಿಸುವುದರಲ್ಲಿ ಕಾಂಗ್ರೆಸ್ ಗಿಣತ ಒಂದು ಹೆಜ್ಜೆ ಮುಂದಿದ್ದಾರೆ ಎಂದರು.

80 ವರ್ಷ ಪ್ರಾಯದ ಯಶ್ವಂತ್ ಸಿನ್ಹಾ ಬಿಜೆಪಿಯ ಹಿರಿಯ ನಾಯಕರಾಗಿದ್ದು, ಆಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವ ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ನಂತರ ಯಶ್ವಂತ್ ಸಿನ್ಹಾ ಮೂಲೆಗುಂಪಾಗ ತೊಡಗಿದರು.

Leave a Reply

Your email address will not be published. Required fields are marked *