ಐಪಿಎಲ್-2018: ಒಂದೇ ಕೈಯಲ್ಲಿ ಸಾಹಸಮಯವಾಗಿ ವಿರಾಟ್ ಕೊಹ್ಲಿ ಕ್ಯಾಚ್ ಪಡೆದ ಬೌಲ್ಟ್! ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ-(22.04.18): ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಟ್ ಪಂಯಾಟವು ನಡೆಯಿತು. ಎಬಿಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡವು ಭರ್ಜರಿ ಜಯಗಳಿಸಿತ್ತು. ಭರ್ಜರಿ ಫಾರ್ಮ್ ನಲ್ಲಿರುವ ನಾಯಕ ವಿರಾಟ್ ಕೊಹ್ಲಿ ಅವರ ಕ್ಯಾಚ್ ಅನ್ನು ಟ್ರೆಂಟ್ ಬೌಲ್ಟ್ ಹಿಡಿದ ರೀತಿಯು ಅಭಿಮಾನಿಗಳಿಗೆ ರೋಚಕ ಅನುಭವ ನೀಡಿತು.

ವಿರಾಟ್ ಕೊಹ್ಲಿಯು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, 30 ರನ್ ಗಳಿಸಿದ್ದ ವೇಳೆ ಸಿಕ್ಸರ್ ಬಾರಿಸಲು ಮುಂದಾದರು. ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ಚೆಂಡನ್ನು ಸಿಕ್ಸರ್ ಗೆ ಟ್ಟಲು ಪ್ರಯತ್ನಿಸಿದ ಸಂದರ್ಭದಲ್ಲಿ ಡೆಲ್ಲಿ ತಂಡದ ಆಟಗಾರ ಟ್ರೆಂಟ್ ಬೌಲ್ಟ್ ಜಿಗಿದು ಒಂದೇ ಕೈನಲ್ಲಿ ಕ್ಯಾಚ್ ಪಡೆದ ರೀತಿಯು ಸ್ವತಃ ವಿರಾಟ್ ಕೊಹ್ಲಿಯನ್ನೇ ನಿಬ್ಬೆರಗಾಗಿಸಿತ್ತು. ಐಪಿಎಲ್ ನ ಇತಿಹಾಸದಲ್ಲೇ ಇದೊಂದು ಶ್ರೇಷ್ಠ ಕ್ಯಾಚ್ ಎಂದು ಬಣ್ಣಿಸಬಹುದಾದ ಇದರ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

Leave a Reply

Your email address will not be published. Required fields are marked *