ವಿದೇಶಕ್ಕೆ ಪರಾರಿಯಾಗುವ ಸುಸ್ತಿದಾರರ ಆಸ್ತಿ ಮುಟ್ಟಗೋಲಿಗೆ ಸುಗ್ರಿವಾಜ್ಞೆ?!

ನ್ಯೂಸ್ ಕನ್ನಡ ವರದಿ(22-04-2018): ಬ್ಯಾಂಕ್ ಗಳಿಗೆ ವಂಚಸುವ ಮೂಲಕ ಆಪರಾಧವೆಸಗಿ ವಿದೇಶಗಳಿಗೆ ಪರಾರಿಯಾಗುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶಕಲ್ಪಿಸುವ ಸುಗ್ರಿವಾಜ್ಞೆ ಪ್ರಸ್ತಾಪಕ್ಕೆ ಸಚಿವ ಸಂಪುಟ ಅನುಮದನೆ ನೀಡುವ ಸಾಧ್ಯತೆಯಿದೆ.

ವಿದೇಶದಿಂದ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕ್ಕಾಗಿ, ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ವಂಚಕರ ವಿರುದ್ಧ ಕಾನೂನು ಕ್ರಮ ತರಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ.
ವಿಜಯ್‌ ಮಲ್ಯ, ನೀರವ್‌ ಮೋದಿ, ಲಲಿತ್‌ ಮೋದಿ, ಮೆಹುಲ್‌ ಚೋಕ್ಸಿ ಸೇರಿದಂತೆ ಹಲವಾರು ಆರ್ಥಿಕ ಅಪರಾಧಿಗಳ ಪಾಲಿಗೆ ಇದು ಕಬ್ಬಿಣದ ಕಡಲೆಯಾಗಿ ಪರಿಣಮಿಸಲಿದೆ.

Leave a Reply

Your email address will not be published. Required fields are marked *