ಆರೆಸ್ಸೆಸ್ ಪ್ರಚಾರಕನೆಂಬ ಕಾರಣಕ್ಕೆ ಆತನನ್ನು ಕೋಮುವಾದಿ ಎನ್ನಲಾಗುವುದಿಲ್ಲ: ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ನ್ಯಾಯಾಧೀಶ
ನ್ಯೂಸ್ ಕನ್ನಡ ವರದಿ(22-04-2018): ಓರ್ವ ವ್ಯಕ್ತಿ ಆರೆಸ್ಸೆಸ್ ಪ್ರಚಾರಕ ಅಥವಾ ಆತನಿಗೆ ಆರೆಸ್ಸೆಸ್ ನೊಂದಿಗೆ ನಿಕಟ ಸಂಬಂಧವಿದೆ ಎಂಬ ಕಾರಣಕ್ಕಾಗಿ ಆತನನ್ನು ಕೋಮುವಾದಿ ಎನ್ನಲು ಸಾಧ್ಯವಿಲ್ಲ ಎಂದು ಮೆಕ್ಕಾ ಮಸೀದಿ ಸ್ಪೋಟದಲ್ಲಿ ಆರೋಪಿಗಳು ನಿರಾಪರಾಧಿಗಳು ಎಂಬ ತೀರ್ಪು ನೀಡಿದ ಎನ್ಐಎ ನ್ಯಾಯಾಧೀಶ ರವೀಂದ್ರ ರೆಡ್ಡಿಯವರು ಅಭಿಪ್ರಾಯ ಪಟ್ಟಿದ್ದಾರೆ.
ಆರೆಸ್ಸೆಸ್ ಒಂದು ನಿಶೇಧಿತ ಸಂಘಟನೆಯಲ್ಲ ಆದ್ದರಿಂದ ಅದರಲ್ಲಿರುವ ಕಾರ್ಯಕರ್ತ ಅಥವಾ ಪ್ರಚಾರಕರನ್ನು ಮೇಲ್ನೋಟಕ್ಕೆ ಕೋಮುವಾದಿಗಳು ಎನ್ನವಂತಿಲ್ಲ ಎಂಬ ಅಭಿಪ್ರಾಯದೊಂದಿಗೆ ರವೀಂದ್ರ ರೆಡ್ಡಿಯವರು ಮೆಕ್ಕಾ ಸ್ಪೋಟದ ಸಂಬಂಧ ಸಿಬಿಐ ಮಾಡಿದ ವಾದವನ್ನು ತಳ್ಳಿಹಾಕಿದರು.
ಆರೋಪಿ ಆಸೀಮಾನಂದ ಅವರು ಚಂಚಲವಾಡ ಜೈಲಿನಲ್ಲಿ ಪ್ರಕರಣದ ಕುರಿತು ತಪ್ಪೊಪಿಕೊಂಡಿದ್ದಾರೆ ಎನ್ನುವ ವಾದವನ್ನು ಒಪ್ಪುವಂತಿಲ್ಲ ಯಾಕೆಂದರೆ ಅದು ನ್ಯಾಯಾಲಯದ ಹೊರಗೆ ನಡೆದ ಪ್ರಹಸನವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.