ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

ನ್ಯೂಸ್ ಕನ್ನಡ ವರದಿ-(22.04.18): ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಟಿಕೆಟ್ ಪಡೆದರೆ ಶಾಂತಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಎನ್.ಎ.ಹ್ಯಾರಿಸ್ ಟಿಕೆಟ್ ಪಡೆಯುವುದರೊಂದಿಗೆ ಬಾದಾಮಿ ಮತ್ತು ಶಾಂತಿನಗರ ಕ್ಷೇತ್ರಗಳ ಅಭ್ಯರ್ಥಿಗಳ ಗೊಂದಲಕ್ಕೆ ತೆರೆ ಎಳೆದಂತಾಗಿದೆ. ಅಂತಿಮ ಹಂತದ ಪಟ್ಟಿಯಲ್ಲಿ ಒಟ್ಟು 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು ಇದರೊಂದಿಗೆ ಕಾಂಗ್ರೆಸ್ ತನ್ನ ಎಲ್ಲಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಂತಾಗಿದೆ.

 • ರಾಯಚೂರು -ಸೈಯದ್ ಯಾಸೀನ್
 • ಸಿಂಧಗಿ- ಮಲ್ಲಣ್ಣ ನಿಂಗಣ್ಣ ಸಾಲಿ
 • ನಾಗಠಾಣ -ವಿಠಲ ಕಠಕದೊಂಡ
 • ಬಾದಾಮಿ -ಸಿದ್ದರಾಮಯ್ಯ
 • ಮಡಿಕೇರಿ-ಕೆ.ಪಿ.ಚಂದ್ರಕಲಾ
 • ಪದ್ಮನಾಭ ನಗರ -ಎಂ..ಶ್ರೀನಿವಾಸ್
 • ಶಾಂತಿನಗರ -ಎನ್.ಎ.ಹಾರೀಸ್
 • ತಿಪಟೂರು- ಕೆ.ಷಡಕ್ಷರಿ
 • ಜಗಳೂರು-ಎಚ್.ಪಿ.ರಾಜೇಶ್
 • ಮಲ್ಲೇಶ್ವರಂ -ಕೆಂಗಲ್ ಶ್ರೀಪಾದ ರೇಣು
 • ಕಿತ್ತೂರು – ಡಿ.ಬಿ. ಇನಾಮ್ ದಾರ್

Leave a Reply

Your email address will not be published. Required fields are marked *