ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆಯೆಬ್ಬಿಸಲು ಮಂಗಳೂರಿಗೆ ಆಗಮಿಸಲಿರುವ ಪ್ರಿಯಾಂಕಾ ವಾದ್ರಾ!

ನ್ಯೂಸ್ ಕನ್ನಡ ವರದಿ(22-04-2018): ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಸೋನಿಯಾಗಾಂಧಿ ಪ್ರಚಾರ ಸಭೆಯಲ್ಲಿ ಭಾಗವಹಿಸದ ಕಾರಣ ಅವರ ಜಾಗವನ್ನು ತುಂಬಲು ಪ್ರಿಯಾಂಕ ವಾದ್ರಾ ರೆಡಿಯಾಗಿದ್ದಾರೆ. ಚುನಾವಣಾ ರ್ಯಾಲಿಯಲ್ಲಿ ಭಾವಹಿಸಲು ಕರ್ನಾಟಕಕ್ಕೆ ಬರಲಿರುವ ಪ್ರಿಯಾಂಕ ಕರಾವಳಿ ಭಾಗದಲ್ಲಿ ಪ್ರಚಾರ ಸಭೆಗಳಲ್ಲಿಯೂ ಭಾಗವಹಿಸಲಿದ್ದಾರೆ.

ಮೇ ತಿಂಗಳ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಬರುವ ಪ್ರಿಯಾಂ ವಾದ್ರ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ರೋಡ್ ಶೋ ನಡೆಸಲಿದ್ದು, ಪ್ರಚಾರ ಸಭೆಗಳನ್ನು ಉದ್ದೇಶಿ ಮಾತನಾಡಲಿದ್ಜಾರೆ ಎಂದು ತಿಳಿದು ಬಂದಿದೆ.

ಇದುವರೆಗೂ ಚುನಾವಣಾ ಸಮಯದಲ್ಲಿ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತನ್ನ ಅನಾರೋಗ್ಯದ ಕಾರಣ ಚುನಾವಣಾ ಪ್ರಚಾರದಿಂದ ದೂರವುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *