ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಹೋರಾಟ ತೀವ್ರಗೊಳಿಸುತ್ತೇನೆ: ಪ್ರಕಾಶ್ ರೈ!

ನ್ಯೂಸ್ ಕನ್ನಡ ವರದಿ(22-04-2018): ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುವಾದಿಗಳ ವಿರುದ್ದದ ನನ್ನ ಹೋರಾಟವನ್ನು ತೀವೃಗೊಳಿಸುತ್ತೇನೆ ಎಂದು ನಟ ಹಾಗೂ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ.

ಮಡಿಕೇರಿಯ ಸಂವಾದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಪ್ರಕಾಶ್ ರೈ, ಕರ್ನಾಟಕದಲ್ಲಿ ಕೋಮುವಾದ ಇರಬಾರದು. ಚುನಾವಣೆಯಲ್ಲಿ ಜೆಡಿಎಸ್​ನವರು ಬಿಜೆಪಿಗೆ‌ ಮಾರಿಕೊಳ್ಳಬೇಡಿ. ಒಂದು ವೇಳೆ ಹಾಗಾದರೆ ಉಗ್ರ ಪ್ರತಿಭಟನೆ ನಡೆಸಬೇಕಾದೀತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.

ರಾಜ್ಯ ಚುನಾವಣೆ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಏನೇ ಹೇಳಬೇಕಾದರೂ ಈ ಸಂದರ್ಭದಲ್ಲಿ ಹೇಳಬೇಕು. ನದಿ ತಿರುವು ಯೋಜನೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಪ್ರಕಾಶ್ ರೈ ಕೇಂದ್ರದ ವಿರುದ್ಧ ಹರಿಹಾಯ್ದರು.

Leave a Reply

Your email address will not be published. Required fields are marked *