ರಾಯುಡು, ರೈನಾ ಭರ್ಜರಿ ಬ್ಯಾಟಿಂಗ್: ಹೈದರಾಬಾದ್ ವಿರುದ್ಧ ಉತ್ತಮ ಮೊತ್ತ ದಾಖಲಿಸಿದ ಚೆನ್ನೈ ತಂಡ
ನ್ಯೂಸ್ ಕನ್ನಡ ವರದಿ-(22.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 20ನೇ ಪಂದ್ಯಾಟವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶಿಖರ್ ಧವನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಪ್ರಥಮ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯುವ ಆಟಗಾರ ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 182/3 ರನ್ ದಾಖಲಿಸಿದೆ.
ಟಾಸ್ ಗೆದ್ದ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಪ್ರಮುಖ ಬ್ಯಾಟ್ಸ್ ಮನ್ ಗಳಾದ ಶೇನ್ ವಾಟ್ಸನ್ ಮತ್ತು ಫಾಫ್ ಡು ಪ್ಲೆಸ್ಸಿಸ್ ವಿಫಲಗೊಂಡರೂ ಭಾರತೀಯ ಆಟಗಾರ ಅಂಬಟಿ ರಾಯುಡು ಸಿಡಿಲಬ್ಬರದ ಪ್ರದರ್ಶನ ನೀಡಿದರು. ಕೇವಲ 37 ಎಸೆತಗಳಲ್ಲಿ 79 ರನ್ ಬಾರಿಸಿದ ರಾಯುಡು ಎದುರಾಳಿ ಬೌಲರ್ ಗಳ ಬೆವರಿಳಿಸಿದರು. ಅಂಬಟಿ ರಾಯುಡುಗೆ ಸಾಥ್ ನೀಡಿದ ಸುರೇಶ್ ರೈನಾ(54) ಕೂಡಾ ಉತ್ತಮ ಬ್ಯಾಟಿಂಗ್ ನಡೆಸಿದರು. ಕೊನೆಗೆ ಆಗಮಿಸಿದ ನಾಯಕ ಧೋನಿ ಗಮನಾರ್ಹ ಪ್ರದರ್ಶನ ನೀಡಿ, ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು.