ಎಪ್ರಿಲ್ 24ರಂದು ಬಿಜೆಪಿ ಹರಿಹರದ ಅಭ್ಯರ್ಥಿಯಾಗಿ ಬಿಪಿ ಹರೀಶ್ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು. ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಧೂಳಿಪಟ ಮಾಡಲು ಚಾಣಕ್ಯ ಅಮಿತ್ ಷಾ ಚತುರ ರಾಜಕೀಯ ನಡೆ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿದೆ.

ಬಿಜೆಪಿ ಇದೀಗ ಘೋಷಿಸಿದ ಟಿಕೆಟ್ ಪ್ರಕಾರ ಹರಿಹರ ಕ್ಷೇತ್ರದಿಂದ ಬಿಪಿ ಹರೀಶ್ ಅವರಿಗೆ ಬಿ ಫಾರಂ ಸಿಕ್ಕಿದೆ. ಹರಿಹರದ ಬಿಜೆಪಿಯ ಅನಭಿಷಕ್ತ ನಾಯಕ, ಜನಪರ ಕೆಲಸದಿಂದಾಗಿಯೇ ಜನರ ಮನಗೆದ್ದಿರುವ ಹರೀಶ್ ತಾವು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಈ ಬಾರಿ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ತಮ್ಮ ನಾಮಪತ್ರ ಸಲ್ಲಿಕೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಪಿ ಹರೀಶ್, ದಿನಾಂಕ 24/04/18 ಮಂಗಳವಾರ ಬೆಳಗ್ಗೆ 11:00 ಕ್ಕೆ ಪಕ್ಷದ ರಾಜ್ಯ ಮುಖಂಡರು ಮತ್ತು ಜಿಲ್ಲಾ ಮುಖಂಡರೊಡನೆ ಒಡಗೂಡಿ ಹರಿಹರದ ನೀರಾವರಿ ಇಲಾಖೆಯಿಂದ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಗ್ರಾಮಾಂತರ ಅಧ್ಯಕ್ಷ ರಾದ ಶ್ರೀ ಗೋವಿನಾಳ್ ರಾಜಣ್ಣ ನವರು ನಗರ ಘಟಕದ ಅಧ್ಯಕ್ಷರಾದ ರಾಜು ರೋಕಡೆ ಅವರು ಜಿಲ್ಲಾ ಪಂಚಾಯತ್ ಸದಸ್ಯರಾದ ವಾಗಿಶ ಸ್ವಾಮಿ, ಚಂದ್ರಶೇಖರ್ ಪೂಜಾರ್ ಮಾಲತೇಶ್ ಭಂಡಾರಿ ಹಿಂಡಸ್ ಗಟ್ಟದ ಪರಮೇಶ್ ಅಣ್ಣ ಬಾರ್ಕಿ ಮಂಜಣ್ಣ ಮತ್ತು ಪೆಪ್ಸಿ ಬಸವರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *