ಚೆನ್ನೈ ವಿರುದ್ಧ ವೀರೋಚಿತ ಸೋಲನುಭವಿಸಿದ ಹೈದರಾಬಾದ್ ತಂಡ!
ನ್ಯೂಸ್ ಕನ್ನಡ ವರದಿ-(22.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 20ನೇ ಪಂದ್ಯಾಟವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶಿಖರ್ ಧವನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಹೈದರಾಬಾದ್ ನಲ್ಲಿ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 183 ರನ್ ಗಳನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ವೀರೋಚಿತ ಸೋಲನ್ನು ಅನುಭವಿಸಿದೆ.
ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಆದರೆ ಕೊನೆಯವರೆಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಕೇನ್ ವಿಲಿಯಮ್ಸನ್ ಕೇವಲ 51 ಎಸೆತಗಳಲ್ಲಿ 84 ರನ್ ಪೇರಿಸಿದರು. ಬಳಿಕ ಯೂಸುಫ್ ಪಠಾಣ್ 27 ಎಸೆತಗಳಲ್ಲಿ 45 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ ಕೊನೆಯ ಕ್ಷಣದಲ್ಲಿ ರಶೀದ್ ಖಾನ್ ವೀರೋಚಿತ ಆಟ ಪ್ರದರ್ಶಿಸಿದರೂ ಕೊನೆಯ ಎಸೆತಕ್ಕೆ ಸಿಕ್ಸರ್ ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ 178 ರನ್ ಗಳಿಸುವ ಮೂಲಕ ಸೋಲನ್ನಪ್ಪಿಕೊಂಡಿತು.