ಆರು ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಮಾಡಿದಾತನಿಗೆ ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿತ!!

ನ್ಯೂಸ್ ಕನ್ನಡ ವರದಿ-(22.04.18): ಹಲವಾರು ದಿನಗಳಿಂದ ದೇಶಾದ್ಯಂತ ಅತ್ಯಾಚಾರ ಸುದ್ದಿಗಳೇ ಕೇಳಿ ಬರುತ್ತಿವೆ. ಪುಟ್ಟ ಮಗುವೋ, ವೃದ್ಧೆಯೋ ಒಂದೂ ನೊಡದೇ ದುಷ್ಕರ್ಮಿಗಳು ಅತ್ಯಾಚಾರ ನಡೆಸುತ್ತಿದ್ದಾರೆ, ನಿನ್ನೆ ಇಂಧೋರ್ ನಲ್ಲೊಂದು ಘಟನೆ ನಡೆದಿದ್ದು, 6 ತಿಂಗಳು ಪ್ರಾಯದ ಪುಟ್ಟ ಹಸುಗೂಸೊಂದನ್ನು ಅದೇ ಮಗುವಿನ ಚಿಕ್ಕಪ್ಪ ಅತ್ಯಾಚಾರ ಮಾಡಿ ಕೊಂದು ಹಾಕಿದ್ದ. ಇದೀಗ ಮಗುವಿನ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಯನ್ನು ಈ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಅಲ್ಲಿದ್ದ ಆಕ್ರೋಶಿತರು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ.

ನಿನ್ನೆ ತಾನೇ ಮಗುವಿನ ತಾಯಿಯ ಮೇಲಿನ ದ್ವೇಷದಿಂದ ತಾಯಿಯ ಪಕ್ಕದಲ್ಲಿ ಮಲಗಿದ್ದ 6 ತಿಂಗಳು ಪ್ರಾಯದ ಪುಟ್ಟ ಮಗುವನ್ನು ಮಗುವಿನ ಚಿಕ್ಕಪ್ಪ ನವೀನ್ ಎಂಬಾತ ಅತ್ಯಾಚಾರ ಮಾಡಿದ್ದ. ಅಲ್ಲದೇ ಮೇಲಿಂದ ಕೆಳಗೆಸೆದು ಕೊಂದಿದ್ದ. ಈ ಪ್ರಕರಣವು ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಇಂದು ಪ್ರಕರಣದ ವಿಚಾರಣೆಗೆಂದು ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸ್ ಜೀಪಿನಲ್ಲಿ ಆರೋಪಿಯನ್ನು ಕರೆದುಕೊಂಡು ಬಂದಾಗ ಅಲ್ಲೇ ಇದ್ದ ಆಕ್ರೋಶಿತ ವ್ಯಕ್ತಿಗಳು ಪೊಲೀಸರನ್ನು ಕೇರ್ ಮಾಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *