SKSSF ಕಲ್ಲಡ್ಕ ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

ನ್ಯೂಸ್ ಕನ್ನಡ ವರದಿ-(22.04.18): SKSSF ಕಲ್ಲಡ್ಕ ಕ್ಲಸ್ಟರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು ಇದರ ಸಭಾಂಗಣದಲ್ಲಿ ನಡೆಯಿತು.

ಸಮಾಜವನ್ನು ತಮ್ಮ ಉತ್ತಮ ಸಂದೇಶಗಳ ಮೂಲಕ ಮುನ್ನಡೆಸುವಂತಹ ವಿದ್ವಾಂಸರು ಶಿಬಿರದ ಮುಂಚೂಣಿ ಯಲ್ಲಿ ನಿಂತು ನಿರ್ವಹಿಸಿದ್ದು ವಿಶೇಷವಾಗಿತ್ತು. ಹಲವಾರು ವಿದ್ವಾಂಸರು ರಕ್ತದಾನ ಮಾಡಿ ಸಮಾಜಕ್ಕೆ ರಕ್ತದಾನದ ಬಗ್ಗೆ ಮಾದರಿಯಾದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸದಕತುಲ್ಲಾಹ್ ಮುಸ್ಲಿಯಾರ್ ಹಾಗೂ ಅಧ್ಯಕ್ಷತೆಯನ್ನು ಕೆ. ಅಶ್ರಫ್ ಮಾನಿಮಜಲು ನಿರ್ವಹಿಸಿದರೆ ಉದ್ಘಾಟನೆಯನ್ನು ಖಾಸಿಂ ದಾರಿಮಿ ಕಿನ್ಯ(ಅಧ್ಯಕ್ಷರು SKSSF ದ.ಕ) ಹಾಗೂ ದುವಾ ಆಶೀರ್ವಾದವನ್ನು ಕಲ್ಲಡ್ಕ ಖತೀಬರಾದ ಇಸ್ಮಾಯಿಲ್ ಫೈಝಿ ನಡೆಸದರು.

ಕಲ್ಲಡ್ಕ ಹಾಗೂ ಆಸುಪಾಸಿನ ಹಲವಾರು SKSSF ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಬಹಳ ಮುತುವರ್ಜಿಯಿಂದ ಇಂತಹ ಸಮಜಸೇವೆಯಲ್ಲಿ ಭಾಗವಹಿಸಿ ಸಂಘಟನಾ ಮಹತ್ವವನ್ನು ಅದರ ಬಾಧ್ಯತೆಗಳನ್ನು ತಿಳಿಸಿಕೊಡುವಲ್ಲಿ ಮಾದರಿಯಾದರು. ಎ ಜೆ ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಉಸ್ತುವಾರಿ ಗೋಪಾಲ ಕೃಷ್ಣ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ SKSSF ಕಲ್ಲಡ್ಕ ಕ್ಲಸ್ಟರ್ ವತಿಯಿಂದ ಬ್ಲಡ್ ಡೊನರ್ಸ್ ಮಂಗಳೂರು ಇದರ ಸೇವೆಯನ್ನು ಗುರುತಿಸಿ ಇಮ್ರಾನ್ ಉಳ್ಳಾಲ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಬ್ಲಡ್ ಡೊನರ್ಸ್ ಮಂಗಳೂರು ಇದರ ವತಿಯಿಂದ ಸಿದ್ದಿಕ್ ಮಂಜೇಶ್ವರ, ಇಮ್ರಾನ್ ಉಳ್ಳಾಲ, ಮುಸ್ತಫಾ ಕೆ ಸಿ ರೋಡ್ ಹಾಗೂ ನೌಷಾದ್ ಕರ್ನಿರೆ, ಅರ್ಷದ್ ಸರಾವ್, ಜಮಾಲ್ ಸರಾವ್,ನೌಷಾದ್ ಕಲ್ಪನೆ ಎಂ. ಫ್ರೆಂಡ್ಸ್ ಅಧ್ಯಕ್ಷರಾದ ಹನೀಫ್ ಹಾಜೀ ಗೋಳ್ತಮಜಲು ಹಾಜರಿದ್ದರು. ಈ ರಕ್ತದಾನ ಶಿಬಿರದಲ್ಲಿ 100ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.

Leave a Reply

Your email address will not be published. Required fields are marked *