ಈ ಸಲ ಕಪ್ ನಮ್ದೇ ಎಂದ ಪಂಜಾಬ್ ತಂಡದ ಕೆ.ಎಲ್ ರಾಹುಲ್, ಕರುಣ್ ನಾಯರ್!

ನ್ಯೂಸ್ ಕನ್ನಡ ವರದಿ-(22.04.18): 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಹಳ ಅದ್ದೂರಿಯಾಗಿ ಮೂಡಿ ಬರುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿನ್ನೆ ನಡೆದ ಪಂದ್ಯದಲ್ಲಿ ಜಯ ಗಳಿಸಿದ್ದು ಸದ್ಯ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ನಡುವೆ ಈ ಸಲಾ ಕಪ್ ನಮ್ದೇ ಎಂಬ ಕೂಗು ಮತ್ತೆ ಜೋರಾಗಿದೆ. ಆದರೆ ಕರ್ನಾಟಕದ ತಂಡದಲ್ಲಿ ಕನ್ನಡಿಗರಿಲ್ಲ ಎನ್ನುವ ಅಳಲು ಕೆಲವು ಅಭಿಮಾನಿಗಳದ್ದಾದರೂ, ಕರ್ನಾಟಕದ ತಂಡವೆಂದು ಬೆಂಬಲಿಸುತ್ತಿದ್ದೇವೆ ಅನ್ನುತ್ತಾರೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕನ್ನಡಿಗ ಆಟಗಾರರಾದ ಕರುಣ್ ನಾಯರ್ ಮತ್ತು ಕೆ.ಎಲ್ ರಾಹುಲ್ ಆರ್.ಸಿ.ಬಿ ತಡವನ್ನು ಟ್ರೋಲ್ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ತಂಡದ ಅಭಿಮಾನಿಗಳ ಬಾಯಲ್ಲಂತೂ ಪ್ರತಿ ನಿತ್ಯ ಈ ಸಲ ಕಪ್ ನಮ್ದೇ ಅನ್ನುವ ಘೋಷವಾಕ್ಯ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ತಂಡದ ಆಟಗಾರರು ಕೂಡಾ ಈ ಸಲ ಕಪ್ ನಮ್ದೆ ಅನ್ನುವ ವೀಡಿಯೋವನ್ನು ನೊಡಿದ್ದೇವೆ. ಆದರೆ ಇದೀಗ ಪಂಜಾಬ್ ತಂಡದಲ್ಲಿರುವ ಕನ್ನಡಿಗರಾದ ಕರುಣ್ ನಾಯರ್ ಮತ್ತು ಕೆ.ಎಲ್ ರಾಹುಲ್, ಈ ಸಲಾ ಕಪ್ ನಮ್ದೇ ಗುರೂ.. ಎಲ್ಲರಿಗೂ ಹೇಳ್ಬಿಡಿ ಅನ್ನುವ ವೀಡಿಯೋವೊಂದು ಸಾಮಾಜಿಕ ತಾಣಗಳಾದ್ಯಂತ ಹರಿದಾಡುತ್ತಿದ್ದು ವೈರಲ್ ಆಗಿದೆ.

Leave a Reply

Your email address will not be published. Required fields are marked *