ಸ್ಟೇಡಿಯಂನಲ್ಲಿ ಧೋನಿಗೆ ಪ್ರೇಮನಿವೇದನೆ ಮಾಡಿದ ಯುವತಿ: ಟ್ವೀಟ್ ಮಾಡಿದ ಐಸಿಸಿ!

ನ್ಯೂಸ್ ಕನ್ನಡ ವರದಿ-(23.04.18): 2 ವರ್ಷಗಳ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಮೊನ್ನೆ ತಾನೇ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯಾಟದಲ್ಲಿ ಅಭಿಮಾನಿಯೊಬ್ಬ ಭದ್ರತೆಗಳನ್ನು ಭೇದಿಸಿಕೊಂಡು ಕ್ರೀಡಾಂಗಣದೊಳಕ್ಕೆ ನುಗ್ಗಿ ಧೋನಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಕರಣವು ಸುದ್ದಿಯಾಗಿತ್ತು. ಇದೀಗ ಯುವತಿಯೊಬ್ಬಳು ಸ್ಟೇಡಿಯಂನಲ್ಲಿ ಪ್ಲೇಕಾರ್ಡ್ ಹಿಡಿದು ಪ್ರಪೋಸ್ ಮಾಡಿದ್ದು ಸುದ್ದಿಯಾಗಿದೆ.

ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲೇ ಹಲವರ ಫೇವರಿಟ್ ಆಗಿ ಮಾರ್ಪಟ್ಟಿದ್ದರು. ಇದೀಗ ಧೋನಿ ಮದುವೆಯಾಗಿದ್ದರೂ ಯುವತಿಯರ ನಡುವೆ ಧೋನಿಯ ಜನಪ್ರಿಯತೆ ಇನ್ನೂ ಕುಗ್ಗಿಲ್ಲ ಅನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಮೊನ್ನೆ ಪಂದ್ಯ ನಡೆಯುತ್ತಿದ್ದ ವೇಳೆ, ‘ ಮಹೇಂದ್ರ ಸಿಂಗ್ ಧೋನಿ ಯಾವತ್ತಿದ್ದರೂ ನನ್ನ ಪ್ರಥಮ ಪ್ರೇಮಿಯಾಗಿದ್ದಾರೆ. ನನ್ನ ಭಾವಿ ಜೊತೆಗಾರ ಕ್ಷಮಿಸಬೇಕು. ನಾನು ಧೋನಿಯನ್ನು ಪ್ರೀತಿಸುತ್ತೇನೆ ಎಂಬ ಪ್ಲೇಕಾರ್ಡ್ ಹಿಡಿದು ಧೋನಿಗೆ ಪ್ರಪೋಸ್ ಮಾಡಿದ ಯುವತಿಯ ಚಿತ್ರವನ್ನು ಸ್ವತಃ ಐಸಿಸಿ ಶೇರ್ ಮಾಡಿದೆ. ಇದೀಗ ಈ ಫೋಟೊ ವೈರಲ್ ಆಗಿದೆ.

Leave a Reply

Your email address will not be published. Required fields are marked *