1900ನೇ ಇಸವಿಯಲ್ಲಿ ಜನಿಸಿದ ವಿಶ್ವದ ಹಿರಿಯಜ್ಜಿ ನಬಿ ತಜೀಮಾ ಇನ್ನಿಲ್ಲ!
ನ್ಯೂಸ್ ಕನ್ನಡ ವರದಿ(22-04-2018): 1900ನೇ ಆಗಸ್ಟ್ 4ರಂದು ಜನಿಸಿದ ವಿಶ್ವದ ಹಿರಿಯಜ್ಜಿ ನಬಿ ತಜೀಮಾ ಎಂಬವರು ಜಪಾನಿನಲ್ಲಿ ನಿಧನರಾದರು. 118 ವರ್ಷದ ಇವರು ವಿಶ್ವದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ವಿಶ್ವದ ಅತೀ ಹಿರಿಯ ಮಹಿಳೆ 117 ವರ್ಷ ಪ್ರಾಯದ ಜಮೈಕಾ ಮೂಲದ ವಯೊಲೇಟ್ ಬ್ರೌನ್ 2017 ರಲ್ಲಿ ಮೃತರಾದ ನಂತರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳು ಜಪಾನಿನ ಕಿಕಾಯಿ ಪಟ್ಟಣದ ನಿವಾಸಿ ನಬಾ ತಜೀಮಾ ಅವರನ್ನು ವಿಶ್ವದ ಅತೀ ಹಿರಿಯ ಮಹಿಳೆ ಎಂದು ಘೋಷಿಸಿದ್ದರು.
ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಸುಮಾರು 160 ಕ್ಕೂ ಅಧಿಕ ವಂಶಸ್ಥರನ್ನು ತಜೀಮಾ ಹೊಂದಿದ್ದಾರೆ. ಜಪಾನಿನ ಮಸಾಝೋ ನೊನಾಕ ಇತ್ತೀಚೆಗಷ್ಟೇ ವಿಶ್ವದ ಪುರುಷನಾಗಿ ಗಿನ್ನೆಸ್ ದಾಖಲೆಯಲ್ಲಿ ಸೇರಿದ್ದರು।