ತನಗಿಂತ ಅರ್ಧ ವಯಸ್ಸಿನ ಕನ್ಯೆಯ ಕೈಹಿಡಿದ ಈ ಸೂಪರ್ ಮಾಡೆಲ್ ಯಾರು ಗೊತ್ತೇ?!

ನ್ಯೂಸ್ ಕನ್ನಡ ನ್ಯೂಸ್(23-04-2018): 53 ವರ್ಷದ ಸೂಪರ್ ಮಾಡೆಲ್ ಒಬ್ಬರು 27 ವರ್ಷದ ಕನ್ಯೆಯ ಕೈಹಿಡಿಯುವ ಮೂಲಕ ಸುದ್ಧಿಯಾಗಿದ್ದಾರೆ. ಹೌದು ಅವರೇ ಮಿಲಿಂದ್ ಸೋಮನ್. ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಅಂಕಿತಾ ಕೋನ್ವರ್ ಅವರನ್ನು ನಿನ್ನೆ ಮದುವೆಯಾಗಿದ್ದಾರೆ.

ಅಸ್ಸಾಮಿ ಹಾಗೂ ಮರಾಠಿ ಸಂಪ್ರದಾಯದಂತೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೋನ್ವರ್ ಮದುವೆಗೆ ಅವರ ಕುಟುಂಬಸ್ಥರು ಹಾಗೂ ಮಿತ್ರರು ಸಾಕ್ಷಿಯಾದರು.

ಈಗಾಗಲೇ ಒಂದು ಮದುವೆ ಆಗಿ ವಿಚ್ಛೇದನ ಪಡೆದಿರುವ ಮಿಲಿಂದ್ ಸೋಮನ್, ಇದೀಗ ತನಗಿಂತ ಅರ್ಧದಷ್ಷು ಚಿಕ್ಕ ವಯಸ್ಸಿನ ಹುಡುಗಿ ಅಂಕಿತಾ ರನ್ನು ಕೈ ಹಿಡಿದಿದ್ದಾರೆ. ಮದುವೆಗಾಗಿ ಗೋಲ್ಡನ್ ಬಾರ್ಡರ್ ಇರುವ ಬಿಳಿ ಸೀರೆಯುಟ್ಟು ಅಂಕಿತಾ ಕಂಗೊಳಿಸಿದ್ರೆ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಲಿಂದ್ ಮಿಂಚಿದರು.

Leave a Reply

Your email address will not be published. Required fields are marked *