ತನ್ನ ಪತಿ ನಿರಪರಾಧಿಯೆಂದು ಹೈಕೋರ್ಟ್ ಮುಂದೆ ಹೋಗಿ ಹೇಳಿದರೂ ಕೇಳುವವರೇ ಇಲ್ಲ: ಡಾ.ಕಫೀಲ್ ಖಾನ್ ಪತ್ನಿ!

ನ್ಯೂಸ್ ಕನ್ನಡ ವರದಿ(23-04-2018): ಕಳೆದ ವರ್ಷ ಉತ್ತರ ಪ್ರದೇಶದ ಗೋರಖ್ ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 60 ಮಕ್ಕಳು ಆಮ್ಲಜನಕ ಕೊರತೆಯಿಂದ ಸಾವೀಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಡಾ.ಕಫೀಲ್ ಖಾನ್ ನಿರಪರಾಧಿಯೆಂದು ನಾವು ಹೈಕೋರ್ಟಿನಲ್ಲಿ ಅವಲತ್ತುಕೊಂಡರೂ ಯಾರೂ ನಮ್ಮನ್ನು ಕೇಳುವವರೇ ಇಲ್ಲ ಎಂದು ಕಫೀಲ್ ಖಾನ್ ಪತ್ನಿ ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಭೇಟಿಯಾಗಿ ತನ್ನ ಪತಿ ನಿರಪರಾಧಿಯೆಂದು, ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಅವರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಬಿಸ್ತಾ ಖಾನ್, ತನ್ನ ಪತಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿರುವುದಕ್ಕೆ ಅನುಭವಿಸಿದ ಶಿಕ್ಷೆಯಿದು ಎಂದು ಹೇಳಿದ್ದಾರೆ.

ತನ್ನ ಸಣ್ಣ ಮಗುವಿನೊಂದಿಗೆ ಹೈಕೋರ್ಟಿಗೆ ಪ್ರತಿನಿತ್ಯ ಅಳೆದು ಸುಸ್ತಾದ ಸಬಿಸ್ತಾ, ಪ್ರಕರಣದ ಕುರಿತು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರದಲ್ಲಿದ್ದಾರೆ.

Leave a Reply

Your email address will not be published. Required fields are marked *