ಐಪಿಎಲ್ ಹರಾಜಿನಲ್ಲಿ 6.2 ಕೋಟಿಗೆ ಖರೀದಿಯಾಗಿದ್ದ ಕನ್ನಡದ ಹುಡುಗ ಕೊನೆಗೂ ತೋರಿಸಿಯೇ ಬಿಟ್ಟ ತನ್ನ ಕೈಚಳಕ!
ನ್ಯೂಸ್ ಕನ್ನಡ ವರದಿ(23-04-2018): ಕೇಲಲ 20 ಲಕ್ಷ ರೂಪಾಯಿ ಮುಖ ಬೆಲೆಯ ಕನ್ನಡದ ಹುಡುಗನೊಬ್ಬ ಬರೊಬ್ಬರಿ 6.2 ಕೋಟಿ ರೂಪಾಯಿಗೆ ಐಪಿಎಲ್ ಬಿಡ್ಡಿಂಗ್ ನಲ್ಲಿ ಸೇಲ್ ಆದಾಗ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಆದರೆ ಕೊನೆಗೂ ಆ ಕನ್ನಡದ ಹುಡುಗ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತನ್ನ ಕೈಚಳಕವನ್ನು ತೋರಿಸಿಯೇ ಬಿಟ್ಟಿದ್ದಾನೆ.
ಹೌದು,ನಿನ್ನೆ ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮೂರು ವಿಕೆಟುಗಳ ಜಯ ತಂದುಕೊಡಲು ಮುಖ್ಯ ಕಾರಣಕರ್ತನೇ ನಮ್ಮ ಕನ್ನಡದ ಹುಡುಗ ಗೌತಮ್ ಕೃಷ್ಣಪ್ಪ.
ಮುಂಬೈ ಇಂಡಿಯನ್ನ್ ನೀಡಿದ 168 ರನ್ ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವಿಗೆ ಕೊನೆಯ 17 ಎಸೆತಗಳಲ್ಲಿ 43 ರನ್ ಗಳ ಅಗತ್ಯವಿದ್ದಾಗ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದ ಗೌತಮ್ ಕೃಷ್ಣಪ್ಪ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರೋಚಕ ಜಯವನ್ನು ತಂದುಕೊಟ್ಟಿದ್ದಾರೆ. ತಾನೆದುರಿಸಿದ ಕೇವಲ 11 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ ಅಜೇಯ 33 ರನ್ ಗಳನ್ನು ಚಚ್ಚುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿಗೆ ಕಾರಣನಾದ ಕನ್ನಡದ ಹುಡುಗ ಗೌತಮ್ ಕೃಷ್ಣಪ್ಪ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.