ಪಂಜಾಬ್ ಬ್ಯಾಂಕ್ ಅಮಾನುಷ ವರ್ತನೆಯಿಂದ ಪ್ರಾಣವೇ ಕಳೆದುಕೊಂಡ ಗ್ರಾಹಕ! ನಡೆದದ್ದೇನು ಗೊತ್ತೇ?
ನ್ಯೂಸ್ ಕನ್ನಡ ವರದಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 11,000 ಕೋಟಿಗಳ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಪ್ರಕರಣ ಮಾಸುವ ಮುನ್ನವೇ ಪಂಜಾಬ್ ನ್ಯಾಷನಲ್ ಮತ್ತೊಮ್ಮೆ ಸುದ್ದಿಯಾಗಿದೆ. ಪಂಜಾಬ್ನ್ಯಾಷನಲ್ ಬ್ಯಾಂಕ್ನಲ್ಲಿ ತಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಳ್ಳಲು ಆಗದೆ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.
ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್ ಕಾಂಬ್ಳೆ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿತ್ತು, ಅವರ ಕುಟುಂಬದ ಸದಸ್ಯರು ಮುಂಬೈನ ಪಿಎನ್ಬಿ ಬ್ಯಾಂಕ್ನ ಶಾಖೆಯೊಂದರ ಹಣ ಡ್ರಾ ಮಾಡಲು ಹೋದಾಗ ಬ್ಯಾಂಕ್ ಮ್ಯಾನೇಜರ್ ಹಣ ನೀಡಲು ನಿರಾಕರಿಸಿದ್ದಾರೆ. ನಿಮಗೆ ಹಣ ಬೇಕಾದರೆ ಖಾತೆದಾರರಾದ ಗಣೇಶ್ ಕಾಂಬ್ಲೆ ಅವರೇ ಖುದ್ದು ಬರಬೇಕೆಂದು ತಗಾದೆ ತೆಗೆದು ಹಣ ನೀಡಲು ನಿರಾಕರಿಸಿದ್ದಾರೆ. ಹಣ ಸಿಗದ ಕಾರಣ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಕಾಂಬ್ಳೆ ಅವರು ಕೊನೆಯುಸಿರೆಳೆದಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಕಾಂಬ್ಳೆರ ನಿಧನದ ನಂತರ ಅವರ ಕುಟುಂಬವರ್ಗಕ್ಕೆ ಹಣ ನೀಡಲು ಸಮ್ಮತಿಸಿದರು. ಆದರೆ ಪಿಎನ್ಬಿಯ ಎಡವಟ್ಟಿನಿಂದಾಗಿ ಅಮಾಯಕ ಜೀವ ಬಲಿಯಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.