ಭಾರತದ ಮುಖ್ಯಮಂತ್ರಿಗಳ ಜನಪ್ರಿಯತೆಯ ಶ್ರೇಣಿಯಲ್ಲಿ ಯೋಗಿ ಆದಿತ್ಯನಾಥ್ ಗೆ ಪ್ರಥಮ ಸ್ಥಾನ: ಫೇಸ್ ಬುಕ್!
ನ್ಯೂಸ್ ಕನ್ನಡ ವರದಿ(23-04-2018): ಫೇಸ್ ಬುಕ್ ಖಾತೆ ಹೊಂದಿರುವ ಭಾರತದ ಮುಖ್ಯಮಂತ್ರಿಗಳ ಪೈಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಫೇಸ್ ಬುಕ್ ಹೇಳಿದೆ.
ಸಾಮಾಜಿಕ ಜಾಲತಾಣ ವೇದಿಕೆ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೇಸ್ ಬುಕ್ ಪೇಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂದರೇ ರಾಜೇ ಹಾಗೂ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗಿಂತ ಜನಪ್ರಿಯತೆ ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಪಡೆದಿದೆ.
2017 ನೇ ಜನವರಿ 1ರಿಂದ 2017 ಡಿಸೆಂಬರ್ 31ರ ವರೆಗಿನ ಭಾರತದ ಮುಖ್ಯಮಂತ್ರಿಗಳ ಫೇಸ್ ಬುಕ್ ಪೋಸ್ಟುಗಳ ಜನಪ್ರಿಯತೆಯನ್ನು ಶೇರ್ ಹಾಗೂ ಕಾಮೆಂಟ್ ಮಾನದಂಡಗಳ ಮೂಲಕ ಅಳೆಯಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೇಸ್ ಬುಕ್ ಪೇಜ್ ಜನಪ್ರಿಯತೆಯಸ್ಲಿ ಮೊದಲನೇ ಸ್ಥಾನ ಪಡೆದಿದೆ ಎಂದು ಉತ್ತರ ಪ್ರದೇಶ ಸರಕಾರಕ್ಕೆ ಫೇಸ್ ಬುಕ್ ಕಡೆಯಿಂದ ಸಂದೇಶ ಬಂದಿದೆ.