ಹರ್ಯಾಣ: ದೇವಾಲಯದೊಳಗೆ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!
ನ್ಯೂಸ್ ಕನ್ನಡ ವರದಿ-(23.04.18): ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ 8 ವರ್ಷದ ಪುಟ್ಟ ಬಾಲಕಿಯೊಬ್ಬಳನ್ನು ದೇವಸ್ಥಾನದೊಳಗೆ ಕೂಡಿ ಹಾಕಿ ಸತತ ಮೂರು ದಿನಗಳ ಕಾಲ ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು. ಈ ಪ್ರಕರಣವು ಭಾರತದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಕ ಖಂಡನೆಗೆ ಒಳಗಾಗಿತ್ತು. ಇದೀಗ ಅಂತಹದೇ ಘಟನೆಯೊಂದು ಮರುಕಳಿಸಿದ್ದು, ಹರ್ಯಾಣದಲ್ಲಿ 13 ವರ್ಷದ ಬಾಲಕಿಯನ್ನು ದೇವಸ್ಥಾನದೊಳಗೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯು ವರದಿಯಾಗಿದೆ.
ಕುಟುಂಬಸ್ಥರ ಪಕ್ಕ ಮಲಗಿದ್ದ 13 ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿದ ನಾಲ್ಕು ಮಂದಿ ದುಷ್ಕರ್ಮಿಗಳು ಸಮೀಪದಲ್ಲೇ ಇದ್ದ ದೇವಸ್ಥಾನದೊಳಗೆ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅತ್ಯಾಚಾರ ಮಾಡಿದ ಬಳಿಕ ಬಾಲಕಿಯನ್ನು ಕೊಲ್ಲಲು ದುಷ್ಕರ್ಮಿಗಳು ಪ್ರಯತ್ನಿಸಿದ್ದು, ಆದರೆ ಬಾಲಕಿಯು ಮೃತಪಟ್ಟಿಲ್ಲ. ಇದೀಗ ಗಂಭೀರ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ