ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮತ್ತೆ ಕರ್ತವ್ಯಕ್ಕೆ ಹಾಜರು!
ನ್ಯೂಸ್ ಕನ್ನಡ(23-04-2018): ತನ್ನ ಕಚೇರಿಯಲ್ಲೇ ದುಷ್ಕರ್ಮಿಯೋರ್ವನಿಂದ ಚೂರಿ ಇರಿತಕ್ಕೆ ಒಳಗಾಗಿ ಜೀವನ್ಮರಣದ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಇಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಸಮಾರು ಒಂದೂವರೆ ತಿಂಗಳ ಹಿಂದೆ ಬೆಂಗಳೂರಿನ ತನ್ನ ಕಚೇರಿಯಲ್ಲಿದ್ದಾಗ ತೇಜರಾಜ್ ಶರ್ಮ ಎಂಬಾತನಿಂದ ಚೂರಿ ಇರಿತಕ್ಕೊಳದಾಗಿ ತೀವೃ ಗಾಯಗೊಂಡಿದ್ದ ವಿಶ್ವನಾಥ್ ಶೆಟ್ಟಿಯನ್ನು ನಂತರ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. 10 ದಿನಗಳ ಕಾಲ ತೀವೃ ನಿಗಾ ಘಟಕದದಲ್ಲಿ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ವಿಶ್ರಾಂತಿ ಪಡೆದು 47 ದಿನಗಳ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತನ್ನ ನೇರ ನಡೆನುಡಿಯ ಮೂಲಕ ಲೋಕಾಯುಕ್ತ ನ್ಯಾಯ ಮೂರ್ತಿಗಳಾದ ವಿಶ್ವನಾಥ ಶೆಟ್ಟಿ ಜವಪ್ರಿಯರಾಗಿದ್ದರು।