ನಾನು ಚಂಬಲ್ ಪ್ರದೇಶದಿಂದ ಬಂದವನು; ಯೋಗಿಯ ಬೆದರಿಕೆಗೆ ಹೆದರುವವನಲ್ಲ: ಅಖಿಲೇಶ್ ಯಾದವ್!
ನ್ಯೂಸ್ ಕನ್ನಡ ವರದಿ(23-04-2018); ನಾನು ಧೈರ್ಯವಂತರ ನಾಡಾದ ಚಂಬಲ್ ಕಣಿವೆ ಪ್ರದೇಶದಿಂದ ಬಂದವನಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ಕುತಂತ್ರ ಮತ್ತು ಬೆದರಿಕೆಗೆ ಹೆದರುವವವನಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಖಿಲೇಶ್, ಯೋಗಿ ನೇತೃತ್ವದ ಸರಕಾರವು ಎಷ್ಟೇ ನಮ್ಮನ್ನು ಬಗ್ಗು ಬಡಿಯಲು ಪ್ರಯತ್ನಿಸಿದರೂ, ನಾನು ಅವರಿಗೆ ಬಗ್ಗುವ ಪ್ರಶ್ನೆಯೇ ಇಲ್ಲ ಕಾರಣ ಚಂಬಲ್ ಎಂಬುವುದು ಧೈರ್ಯವಂತರ ಹಾಗೂ ಶೂರರ ನಾಡಾಗಿದೆ. ನಾನು ಕೂಡ ಅಂದೆ ಚಂಬಲ್ ನಿಂದ ಬಂದನಾಗಿದ್ದು, ಹೆದರಿಕೆ ಏನೆಂದೇ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಗೋರಖ್ ಪುರದ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ದೇಶದ ‘ಟರ್ನಿಂಗ್ ಪಾಯಿಂಟ್’ ಎಂದ ಅಖಿಲೇಶ್, ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿಯನ್ನು ಹೊಸ ದಿಕ್ಸೂಚಿ ಎಂದರಲ್ಲದೆ ಈ ಮೈತ್ರಿಯು ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.