ಯಡ್ಡಿಗೇ ಶಾಕ್ ನೀಡಿದ ಹೈಕಮಾಂಡ್; ಪುತ್ರ ವಿಜಯೇಂದ್ರಗೆ ಟಿಕೆಟ್ ನೀಡಲು ನಿರಾಕರಣೆ!

ನ್ಯೂಸ್ ಕನ್ನಡ ವರದಿ: ರಾಜ್ಯ ರಾಜಕಾರಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಈ ವರೆಗೂ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ.

ಯಡಿಯೂರಪ್ಪ ಅವರ ಕೊನೆಯ ಚುನಾವಣೆ ಆದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿಯಲ್ಲಿ ಈ ಬಾರಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಸರ್ವ ರೀತಿಯಲ್ಲಿ ತಯಾರಿ ನಡಿಸಿದ್ದರು. ವಿಜಯೇಂದ್ರ ವರುಣಾ ಕ್ಷೇತ್ರವನ್ನೇ ಇತ್ತೀಚೆಗೆ ತಮ್ಮ ನಿವಾಸ ಸ್ಥಳವನ್ನಾಗಿಸಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚುನಾವಣಾ ಪೂರ್ವ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದೀಗ ದಿಢೀರನೆ ಬಂದಂತ ಆದೇಶದಂತೆ ಹೈಕಮಾಂಡ್ ಯಡ್ಡಿ ಪುತ್ರನ ಟಿಕೆಟ್ ತಡೆಹಿಡಿದಿದ್ದು ಸ್ವತ ಯಡಿಯೂರಪ್ಪನವರನ್ನೇ ವಿಚಲಿತಗೊಳಿಸಿದೆ.

ಆದರೂ ಸುಧಾರಿಸಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿ ‘ವರುಣಾ ಕ್ಷೇತ್ರದಲ್ಲಿ ತಮ್ಮ ಮಗ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಬಿಎಸ್​ವೈ, ಆತ ವರುಣಾಗೆ ಮಾತ್ರ ಸೀಮಿತವಾಗಬಾರದು. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಾದ್ಯಂತ ಪ್ರವಾಸ ಮಾಡಿ ದೊಡ್ಡ ಮಟ್ಟದ ನಾಯಕನಾಗಿ ಬೆಳೆಯಬೇಕು ಎಂದು ಹೇಳಿದರು.

ವಿಜಯೇಂದ್ರಗೆ ವರುಣಾ ಟಿಕೆಟ್ ಕೊಡಬಾರದೆಂದು ತಾನು ನಂಜನಗೂಡಿಗೆ ಹೊರಡುವ ಮುನ್ನವೇ ತೀರ್ಮಾನಿಸಿದ್ದೆ. ಈ ನಿರ್ಧಾರದ ಹಿಂದೆ ಸಂಘಪರಿವಾರದ ಅಥವ ಹೈಕಮಾಂಡ್ ನಾಯಕರ ಹಸ್ತಕ್ಷೇಪ ಇಲ್ಲ ಎಂದು ಬಿಎಸ್​ವೈ ಹೇಳಿದರು.

ಹಲವು ಕಾರಣದಿಂದ ವಿಜಯೇಂದ್ರ ಇಲ್ಲಿ ಸ್ಪರ್ಧಿಸುತ್ತಿಲ್ಲ. ನಿರ್ಧಾರ ಬದಲಿಸೋಕೆ ಇಂಥ ಕಾರಣ ಎಂದು ಹೇಳೋದಿಲ್ಲ. ವಿಜಯೇಂದ್ರನ ಅಪೇಕ್ಷೆಯಲ್ಲಿದ್ದ ವರುಣಾ ಜನತೆಗೆ ತಾನು ಕ್ಷಮೆ ಕೇಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ನಂಜನಗೂಡಿನ ಖಾಸಗಿ ಹೋಟೆಲ್ ಮುಂಭಾಗದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಈ ಘಟನೆ ನಡೆಯಿತು. ನಂತರ ಆಕ್ರೋಶ ವ್ಯಕ್ತ ಪಡಿಸಿದ ವಿಜಯೇಂದ್ರ ಅಭಿಮಾನಿಗಳಿಂದ ಗದ್ದಲ ಉಂಟಾಯಿತು.

Leave a Reply

Your email address will not be published. Required fields are marked *