ಭೂಮಿಗಿಂತ 8000 ಅಡಿ ಎತ್ತರದಲ್ಲಿ ಕಳಚಿ ಬಿತ್ತು ಏರ್ ಇಂಡಿಯಾ ವಿಮಾನದ ಗಾಜು: ಮುಂದೇನಾಯಿತು ನೋಡಿ ಭಯಾನಕ ವಿಡಿಯೋ!
ನ್ಯೂಸ್ ಕನ್ನಡ ವರದಿ23-04-2018): ಏಪ್ರಿಲ್ 19ರಂದು ಅಮೃತಸರ ದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದ ಕಿಟಕಿಯ ಗ್ಲಾಸ್ ಕಳಚಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ತಡವಾಗಿ ವರದಿಯಾಗಿದೆ.
ಅಮೃತ ಸರ ವಿಮಾನದಿಂದ ಬೆಂಗಳೂರಿಗೆ ಹಾರಾಟ ಪ್ರಾರಂಭಿಸಿದ ಏರ್ ಇಂಡಿಯಾದ ಕಿಟಕಿನ ಗಾಜು ಇದ್ದಕ್ಕಿದ್ದಂತೆ ಕಳಚಿ ಬಿದ್ದ ಪರಿಣಾಮ ವಿಮಾಣದಲ್ಲಿದ್ದ ಪ್ರಯಾಣಿಕರು ಬಹಳ ಭಯಬೀತರಾದರು. ವಿಮಾನವು ಭೂಮಿಗಿಂತ 8000 ಅಡಿ ಎತ್ತರದಲ್ಲಿ ಹಾರಾಡುತ್ತಿರುವಾಗ ಈ ಅನಾಹುತ ಸಂಭವಿಸಿದೆ.
ಹಾರಾಟದ ನಡುವೆಯೇ ವಿಮಾನದಲ್ಲಿ ಒಮ್ಮೆಲೆ ಹೊಯ್ದಾಟ ಉಂಟಾಗಿದ್ದು, ಸ್ವಲ್ಪ ಸಮಯದ ನಂತರ ವಿಮಾನದ ಕಿಟಕಿನ ಗಾಜು ಕಳಚಿ ಬಿತ್ತು. ಕಿಟಕಿಯ ಹತ್ತಿರ ಕುಳಿತಿದ್ದ ನಾಲ್ವರು ಪ್ರಯಾಣಿಕರಿಗೆ ಇದರಿಂದ ಗಾಯಗಳಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನ ತೋಯ್ದಾಟದ ಕಾರಣದ ಕುರಿತು ಏರ್ ಇಂಡಿಯಾ ತನಿಖೆ ನಡೆಸಿತ್ತಿದೆ.