ಅಪಘಾತದಲ್ಲಿ ತಲೆಗೆ ಪೆಟ್ಟಾದ ವ್ಯಕ್ತಿಯ ಕಾಲಿಗೆ ಚಿಕಿತ್ಸೆ ನೀಡಿದ ವೈದ್ಯ ಮಹಾಶಯ!
ನ್ಯೂಸ್ ಕನ್ನಡ ವರದಿ(24-04-2018): ಅಪಘಾತದಲ್ಲಿ ತನ್ನ ಮುಖ ಹಾಗೂ ತಲೆಗೆ ಗಾಯಗಳಾದ ವ್ಯಕ್ತಿಯ ಕಾಲನ್ನು ಕೊರೆಯುವ ಮೂಲಕ ಚಿಕಿತ್ಸೆ ನೀಡಿದ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.
ವಿಜಯೇಂದ್ರ ತ್ಯಾಗಿ ಎಂಬ ವ್ಯಕ್ತಿಗೆ ಅಪಘಾತದಲ್ಲಿ ತಲೆಗೆ ಗಾಯವಾಗಿತ್ತು. ಆತನನ್ನು ಚಿಕಿತ್ಸೆಗಾಗಿ ದೆಹಲಿಯ ಟ್ರೀಮಾ ಸೆಂಟರಿಗೆ ದಾಖಲಿಯಲಾಗಿತ್ತು. ಗೊಂದಲದಿಂದಾಗಿ ವೈದ್ಯನು ಇನ್ನೊಬ್ಬ ರೋಗಿಗೆ ನೀಡಬೇಕಾದ ಚಿಕಿತ್ಸೆಯನ್ನು ವಿಜಯೇಂದ್ರ ತ್ಯಾಗಿಗೆ ನೀಡುವ ಮೂಲಕ ತಲೆಗೆ ಪೆಟ್ಟಾದ ಯುವಕನ ಕಾಲನ್ನೂ ಗಾಯಗೊಳಿಸುವ ಮೂಲಕ ಆತ ನಡೆಯದಂತೆ ಮಾಡಿದ ಪ್ರಸಂಗ ನಡೆದಿದೆ.
ತಪ್ರಿತಸ್ಥ ವೈದ್ಯನ ವಿರುದ್ಧ ರೋಗಿಯ ಕುಟುಂಬಸ್ಥರು ಯಾವುದೇ ದೂರು ನೀಡದಿದ್ದರೂ, ಆಸ್ಪತ್ರೆಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.