ವರದಕ್ಷಿಣೆ ತರಲಿಲ್ಲ ಎಂದು ನವವಿವಾಹಿತೆಗೆ ಪಾಪಿ ಪತಿ ಕೊಟ್ಟ ಶಿಕ್ಷೆಯೇನು ಗೊತ್ತೇ?
ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಹಲವಾರು ಆಘಾತಕಾರಿ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ, ಇದು ಜನಸಾಮಾನ್ಯರಲ್ಲಿ ಆಕ್ರೋಶ ಉಂಟುಮಾಡಿದ್ದು. ಗುವಾಹಟಿಯಲ್ಲಿ ಮತ್ತೊಂದು ಪೌಶಾಚಿಕ ಘಟನೆ ನಡೆದಿದ್ದು, ಪಾಪಿ ಪತಿಯೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಈ ಘಟನೆ ದಕ್ಷಿಣ ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನನ್ನ ಮದುವೆಯಾದ ನಂತರ ಪತಿ ವರದಕ್ಷಿಣೆಗಾಗಿ ಚಿನ್ನವನ್ನು ತರುವಂತೆ ಒತ್ತಾಯಿಸಿದ್ದಾನೆ. ಆದರೆ ಆತನ ಬೇಡಿಕೆಗೆ ನಾನು ಒಪ್ಪದಿದ್ದಕ್ಕೆ ಆತ ಸ್ನೇಹಿತರ ಜೊತೆ ಸೇರಿ ಏಪ್ರಿಲ್ 17 ರಂದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಅಂತಾ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.