ದೇಶದಲ್ಲಿ ಮೋದಿ ಮತ್ತು ಅಮಿತ್ ಶಾ ಮಾತ್ರ ಮನುಷ್ಯರು, ಉಳಿದವರೆಲ್ಲ ಪ್ರಾಣಿಗಳೇ?: ರಾಹುಲ್ ಗಾಂಧಿ ಪ್ರಶ್ನೆ

ನ್ಯೂಸ್ ಕನ್ನಡ ವರದಿ(07-04-2018): ದೇಶದ ಜನತೆಯಲ್ಲಿ ಮೋದಿ ಮತ್ತು ಅಮಿತ್ ಶಾ ಹೊರತು ಪಡಿಸಿದರೆ ಮಿಕ್ಕುಳಿದವರೆಲ್ಲ ಪ್ರಾಣಿಗಳೇ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕೋಲಾರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಅಮಿತ್ ಶಾ ಪ್ರತಿಪಕ್ಷದವರನ್ನು ನಾಯಿ, ಬೆಕ್ಕು, ಚೀತಾ, ನವಿಲು ಹಾಗೂ ಮುಂಗುಸಿಗೆ ಹೋಲಿಸಿದ್ದಾರೆ. ಅಂದರೆ ಮೋದಿ ಮತ್ತು ಷಾ ಮಾತ್ರ ಮನುಷ್ಯರು ಮಿಕ್ಕುಳಿದವರೆಲ್ಲ ಪ್ರಾಣಿಗಳು ಎಂದರ್ಥವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮೋದಿ ಬ್ಯಾಂಕ್ ಲೂಟಿಕೋರರ ಪರವಾಗಿ ಇದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯಗೆ ಮೋದಿ ಬೆಂಬಲವಿದೆ. ಲೂಟಿಕೋರಿಗೆ ಎಷ್ಟು ಬೇಕಾದರೂ ಸಾಲ ಕೊಡುತ್ತಾರೆ. ಇನ್ನೊಂದೆಡೆ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ನರೇಂದ್ರ ಮೋದಿ ಸರ್ಕಾರ ಸಂವಿಧಾನ ಬದಲಾವಣೆ ಮಾಡಲು ಹೋದರೆ ದೇಶದಾದ್ಯಂತ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು

Leave a Reply

Your email address will not be published. Required fields are marked *