ಸಲ್ಮಾನ್ ಮೇಲಿನ 6 ಪ್ರಕರಣಗಳ ವಿಚಾರಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್! ಯಾವ ಪ್ರಕರಣಗಳು ಗೊತ್ತೇ?
ನ್ಯೂಸ್ ಕನ್ನಡ ವರದಿ : ಸದ್ಯದಲ್ಲಿಯೇ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ್ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು, ಜಾಮೀನಿನ ಮೇಲೆ ಸಲ್ಮಾನ್ ಖಾನ್ ಬಿಡುಗಡೆಯಾಗಿದ್ದಾರೆ. ಮತ್ತೊಂದು ವಿವಾದದಲ್ಲಿ ಸಲ್ಮಾನ್ ಖಾನ್ ಹಿಂದೆ ಬಿದ್ದಿತ್ತು, ‘ಟೈಗರ್ ಜಿಂದಾ ಹೈ’ ಚಿತ್ರದ ಪ್ರಮೋಷನ್ ವೇಳೆ ರಿಯಾಲಿಟಿ ಶೋವೊಂದರಲ್ಲಿ ಸಲ್ಮಾನ್ ಖಾನ್, ವಾಲ್ಮೀಕಿ ಸಮಾಜಕ್ಕೆ ಧಕ್ಕೆ ತರುವ ಪದವನ್ನು ಬಳಸಿದ್ದರು ಎಂಬ ಆರೋಪವಿದೆ. ಈ ಬಗ್ಗೆ ವಿವಿಧ ಕೋರ್ಟ್ಗಳಲ್ಲಿ ನಡೆಯುತ್ತಿರುವ 6 ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಸಲ್ಮಾನ್ ಖಾನ್ ನಿರಾಳರಾಗುವಂತಾಗಿದೆ.
‘ಟೈಗರ್ ಜಿಂದಾ ಹೈ’ ಚಿತ್ರದ ಪ್ರಮೋಷನ್ ವೇಳೆ ರಿಯಾಲಿಟಿ ಶೋವೊಂದರಲ್ಲಿ ಸಲ್ಮಾನ್ ಖಾನ್, ವಾಲ್ಮೀಕಿ ಸಮಾಜಕ್ಕೆ ಧಕ್ಕೆ ತರುವ ಪದವನ್ನು ಬಳಸಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಸಲ್ಮಾನ್ ವಿರುದ್ಧ ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ವಿವಿಧ ಕೋರ್ಟ್ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕೆಂದು ನಟ ಸಲ್ಮಾನ್ ಪರ ವಕೀಲರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಸಲ್ಮಾನ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿ ಎಲ್ಲಾ ಪ್ರಕರಣಗಳ ವಿಚಾರಣೆಗೆ ತಡೆ ನೀಡಿದೆ. ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 23ಕ್ಕೆ ನ್ಯಾಯಾಲಯ ನಿಗದಿ ಮಾಡಿದೆ.