ರಾಜ್ಯ ಬಿಜೆಪಿಯ ಅರ್ಧಕ್ಕಿಂತ ಹೆಚ್ಚು ಟಿಕೆಟ್ ಹಣಕ್ಕೆ ಮಾರಾಟ!: ಬೆಳ್ಳುಬ್ಬಿ ಗಂಭೀರ ಆರೋಪ
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಟಿಕೆಟ್ ದೊರೆಯದ ರಾಜಕೀಯ ನಾಯಕರು ಪರಸ್ಪರ ವಾಕ್ಸಮರದ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಶೇಕಡ 50 ರಷ್ಟು ಟಿಕೆಟ್ ಗಳನ್ನು ಮಾರಾಟವಾಗಿವೆ ಎಂದು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ರೇಟ್ ನಲ್ಲಿ ಬಿಜೆಪಿ ಟಿಕೆಟ್ ಗಳು ಹಂಚಿಕೆಯಾಗಿವೆ. ತಮಗೆ ಈ ಬಾರಿ ಟಿಕೆಟ್ ನೀಡುವುದಾಗಿ ಸ್ವತಃ ಹೇಳಿದ್ದ ಯಡಿಯೂರಪ್ಪ, ಕೊನೆ ಗಳಿಗೆಯಲ್ಲಿ ಟಿಕೆಟ್ ಬದಲಾಯಿಸಿದ್ದಾರೆ. ಇದರಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಮುಖಂಡರು ಶಾಮೀಲಾಗಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ತಾವು ವಿಜಯಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು. ಈಗ ರಾಜ್ಯದಲ್ಲಿ ಯಡಿಯೂರಪ್ಪ ಹವಾ ಇಲ್ಲ. ಟಿಕೆಟ್ ಮಾರ್ಟದ ನಂತರವಂತೂ ಅವರ ವರ್ಚಸ್ಸು ಮತ್ತಷ್ಟು ಕುಸಿದಿದೆ ಎಂದು ಆರೋಪಿಸಿದರು